ಕಪಾಟಿನಲ್ಲಿ ಹಳೆ ಷೇರಿನ ಪೇಪರ್ ಸಿಕ್ಕಿದ ತಕ್ಷಣ ಖುಷಿಯಾಗುತ್ತೆ. ಇದನ್ನು ಮಾರಾಟ ಮಾಡಿ ಸ್ವಲ್ಪ ಹಣ ಸಂಪಾದನೆ ಮಾಡಬಹುದೆಂದು ಎಲ್ಲರೂ ಆಲೋಚನೆ ಮಾಡ್ತಾರೆ. ಆದ್ರೆ ಹಳೆ ಷೇರಿನ ಪೇಪರ್ ಮಾರಾಟ ಮಾಡುವುದು ಅಷ್ಟು ಸುಲಭವಲ್ಲ. ಮಾರುಕಟ್ಟೆ ನಿಯಂತ್ರಕರ ನಿಯಮಗಳ ಪ್ರಕಾರ, ಷೇರು ಮಾರುಕಟ್ಟೆಯಲ್ಲಿ, ಭೌತಿಕ ಷೇರುಗಳನ್ನು ಮಾರಾಟ ಮಾಡಲು ಅಥವಾ ವರ್ಗಾಯಿಸಲು ಸಾಧ್ಯವಿಲ್ಲ. ಇದಕ್ಕಾಗಿ, ಅವುಗಳನ್ನು ಮೊದಲು ಎಲೆಕ್ಟ್ರಾನಿಕ್ ರೂಪದಲ್ಲಿ ಅಂದರೆ ಡಿಮ್ಯಾಟ್ ಆಗಿ ಪರಿವರ್ತಿಸಬೇಕು.
ಭೌತಿಕ ರೂಪದಲ್ಲಿರು ಷೇರುಗಳು ನಿಷ್ಪ್ರಯೋಜಕ ಅಥವಾ ಅವುಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದರ್ಥವಲ್ಲ. ಅವುಗಳನ್ನು ಮಾರಾಟ ಮಾಡುವಾಗ ಭೌತಿಕ ರೂಪದಲ್ಲಿ ಮಾರಾಟ ಸಾಧ್ಯವಿಲ್ಲ. ಅದನ್ನು ಎಲೆಕ್ಟ್ರಾನಿಕ್ ರೂಪಕ್ಕೆ ಪರಿವರ್ತಿಸಬೇಕಾಗುತ್ತದೆ. ನಂತ್ರ ನೀವು ಮಾರಾಟ ಮಾಡಬಹುದು. ಭೌತಿಕ ರೂಪದಿಂದ ಎಲೆಕ್ಟ್ರಾನಿಕ್ ರೂಪಕ್ಕೆ ಷೇರುಗಳನ್ನು ಪರಿವರ್ತಿಸುವುದನ್ನು ಡಿಮೆಟೀರಿಯಲೈಸೇಶನ್ ಎಂದು ಕರೆಯಲಾಗುತ್ತದೆ.
ಮೊದಲು ನೀವು ಡಿಮ್ಯಾಟ್ ಖಾತೆಗೆ ಷೇರುಗಳನ್ನು ವರ್ಗಾಯಿಸಿಕೊಳ್ಳಬೇಕು. ಬೇರೆ ಯಾವುದೇ ಖಾತೆಗೆ ಷೇರುಗಳನ್ನು ವರ್ಗಾಯಿಸಲು ಸಾಧ್ಯವಿಲ್ಲ.
ಮೊದಲು ಸ್ಟಾಕ್ ಬ್ರೋಕರ್ಗಳೊಂದಿಗೆ ಡಿಮ್ಯಾಟ್ ಖಾತೆಯನ್ನು ತೆರೆಯಬೇಕು. ನಿಮ್ಮ ಕೆವೈಸಿ ಪರಿಶೀಲನೆ ಮಾಡಲಾಗುತ್ತದೆ. ಡಿಮ್ಯಾಟ್ ಖಾತೆಯನ್ನು ತೆರೆದಾಗ, ಭೌತಿಕ ಷೇರುಗಳನ್ನು ಡಿಮೆಟೀರಿಯಲೈಸ್ಡ್ ಸ್ವರೂಪಕ್ಕೆ ಪರಿವರ್ತಿಸಲು ವಿನಂತಿಸಿಕೊಳ್ಳಬೇಕು. ಭೌತಿಕ ಷೇರುಗಳನ್ನು ಡಿಮ್ಯಾಟ್ ಕಂಪನಿ ಡಿಮೆಟೀರಿಯಲೈಸೇಶನ್ ರಿಕ್ವೆಸ್ಟ್ ಫಾರ್ಮ್ ಜೊತೆಗೆ ಸಲ್ಲಿಸಬೇಕು. ಎಲ್ಲಾ ಶರಣಾದ ಷೇರುಗಳಿಗೆ ಸ್ವೀಕೃತಿ ಸ್ಲಿಪ್ ನೀಡಲಾಗುತ್ತದೆ. ಪರಿಶೀಲನೆಯ ನಂತರ ಭೌತಿಕ ಷೇರುಗಳನ್ನು ಡಿಮ್ಯಾಟ್ ಖಾತೆಗೆ ಜಮಾ ಮಾಡಲಾಗುತ್ತದೆ.