alex Certify ಪೇಟಿಎಂ – ಫೋನ್‌ ಪೇ ಗೆ ಸೆಡ್ಡು ಹೊಡೆಯಲು ಸಜ್ಜಾದ ಅದಾನಿ ಗ್ರೂಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೇಟಿಎಂ – ಫೋನ್‌ ಪೇ ಗೆ ಸೆಡ್ಡು ಹೊಡೆಯಲು ಸಜ್ಜಾದ ಅದಾನಿ ಗ್ರೂಪ್

ಟೆಕ್ ಕ್ಷೇತ್ರಕ್ಕೆ ಭರ್ಜರಿ ಎಂಟ್ರಿ ಕೊಡಲು ನೋಡುತ್ತಿರುವ ಅದಾನಿ ಉದ್ಯಮ ಸಮೂಹ ಸೂಪರ್‌ ಅಪ್ಲಿಕೇಶನ್ ಒಂದನ್ನು ಬಿಡುಗಡೆ ಮಾಡಲು ಸನ್ನದ್ಧವಾಗಿದೆ.

ಇದಕ್ಕೆಂದೇ ಅಡಾನಿ ಡಿಜಿಟಲ್ ಲ್ಯಾಬ್ಸ್‌ ಸ್ಥಾಪಿಸಿರುವ ಅಹಮದಾಬಾದ್ ಮೂಲದ ಉದ್ಯಮ ಸಮೂಹವು ಟಾಟಾ ಹಾಗೂ ರಿಲಯನ್ಸ್‌ನಂಥ ಸಮೂಹಗಳನ್ನು ಹಿಂದಿಕ್ಕಿ ಫೋನ್‌ಪೇ, ಪೇಟಿಎಂ ಹಾಗೂ ಗೂಗಲ್‌ ಪೇ ಕೊಡುತ್ತಿರುವ ರೀತಿಯ ಸೇವೆಗಳನ್ನು ಕೊಡಲು ಸಿದ್ಧತೆ ಮಾಡಿಕೊಂಡಿದೆ.

ಸೂಪರ್‌-ಆಪ್ ಮೂಲಕ ಇ-ವಾಣಿಜ್ಯ, ಆನ್ಲೈನ್ ಟಿಕೆಟ್ ಬುಕಿಂಗ್, ರೀಚಾರ್ಜ್ ಸೇವೆಗಳು ಸೇರಿದಂತೆ ಬಹಳಷ್ಟು ಸೇವೆಗಳನ್ನು ಒಂದೇ ಗವಾಕ್ಷಿ ಮೂಲಕ ಪಡೆಯಬಹುದಾಗಿದೆ.

40 ಕೋಟಿ ಗ್ರಾಹಕರನ್ನು ಹೊಂದಿರುವ ಅದಾನಿ ಸಮೂಹ, ಸೂಪರ್‌ ಆಪ್ ಕ್ಷೇತ್ರದಲ್ಲಿ ಮುಂಚೂಣಿ ಆಟಗಾರನಾಗುವ ಬಯಕೆ ಹೊಂದಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...