ಶತಮಾನದ ಇತಿಹಾಸ ಪೂರೈಸಲಿರುವ ಲಖನೌ ಮೃಗಾಲಯವು ಇದೇ ನವೆಂಬರ್ 29ರಂದು ಶತಮಾನೋತ್ಸವದ ಸ್ತಂಭ ಅಳವಡಿಸಿಕೊಳ್ಳಲಿದೆ. ನವಾಬ್ ವಾಜಿದ್ ಅಲಿ ಶಾ ಮೃಗಾಲಯ ಎಂದೂ ಕರೆಯಲಾಗುವ ಈ ಮೃಗಾಲಯ ಇತಿಹಾಸವನ್ನು ಒಂದು ಕಡೆ ಹಾಗೂ ಮತ್ತೊಂದು ಕಡೆಯಲ್ಲಿ ಅದರ ಉದ್ಘಾಟನಾ ದಿನಾಂಕವನ್ನೂ ಶತಮಾನೋತ್ಸವ ಸ್ಥಂಭ ಹೊಂದಿರಲಿದೆ.
ಸ್ತಂಭದೊಂದಿಗೆ ಮೃಗಾಲಯದ ಚಿಹ್ನೆ ಇರುವ ಅಂಚೆ ಸ್ಟಂಪ್ ಒಂದನ್ನು ಬಿಡುಗಡೆ ಮಾಡಲು ನಿರ್ಧರಿಸಿರುವ ಮೃಗಾಲಯದ ಆಡಳಿತ, ಇದೇ ವೇಳೆ ಮೃಗಾಲಯಕ್ಕೆ ಬರುವ ಪ್ರೇಕ್ಷಕರು ಕ್ಲಿಕ್ ಮಾಡಿರುವ ವಿಶೇಷ ಚಿತ್ರಗಳಿರುವ ಸ್ಮರಣಿಕೆಯನ್ನೂ ಬಿಡುಗಡೆ ಮಾಡಲು ನಿರ್ಧರಿಸಿದೆ.
ವೇಲ್ಸ್ ರಾಜಕುಮಾರ ಲಖನೌಗೆ ಭೇಟಿ ಕೊಟ್ಟ ಸ್ಮರಣಾರ್ಥ, ನವೆಂಬರ್ 29, 1921ರಲ್ಲಿ ಈ ಮೃಗಾಲಯದ ಉದ್ಘಾಟನೆ ಮಾಡಲಾಗಿತ್ತು.