ಪಾನ್ ಕಾರ್ಡ್ ಕಳೆದುಹೋಗುವುದು ಭಾರೀ ತಲೆನೋವಿನ ವಿಚಾರವಾಗಿದ್ದು, ಸರ್ಕಾರೀ ಹಾಗೂ ಖಾಸಗಿ ಸಂಸ್ಥೆಗಳಿಂದ ಒದಗುವ ಆರ್ಥಿಕ ಸೇವೆಗಳನ್ನು ಪಡೆಯಲು ಕಷ್ಟವಾಗುತ್ತದೆ.
ಪಾನ್ ಕಾರ್ಡ್ ಕಳೆದುಹೋದರೆ ನೀವೀಗ ಎನ್ಎಸ್ಡಿಎಲ್ ಜಾಲತಾಣಕ್ಕೆ ಭೇಟಿ ಕೊಟ್ಟು, ಕಾರ್ಡ್ನ ಮರುಮುದ್ರಣಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಈ ಪ್ರಕ್ರಿಯೆ ಕೆಲ ದಿನಗಳನ್ನು ಬೇಡುತ್ತದೆ.
ಹೀಗಾಗಿ ತುರ್ತು ಕೆಲಸದ ಮೇಲೆ ನಿಮಗೆ ಪಾನ್ ಕಾರ್ಡ್ ಬೇಕಾದಲ್ಲಿ ನೀವೀಗ ಇ-ಪಾನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಇ-ಪಾನ್ ಪಡೆಯಲು ನೀವು ಮಾಡಬೇಕಾಗಿದ್ದು:
1. https://www.utiitsl.com/ ವಿಳಾಸಕ್ಕೆ ಭೇಟಿ ನೀಡಿ.
2. ‘PAN card services’ ಆಯ್ಕೆ ಮಾಡಿ.
3. ‘Download e-PAN’ ಆಯ್ಕೆಗೆ ಹೋಗಿ.
4. ನಿಮ್ಮ ಪಾನ್ ಕಾರ್ಡ್ ವಿವರಗಳನ್ನು ಸಲ್ಲಿಸಿ.
5. ಜನ್ಮದಿನಾಂಕ ಸೇರಿದಂತೆ ನಿಮ್ಮ ವೈಯಕ್ತಿಕ ವಿವರ ಸಲ್ಲಸಿ. ಬೇಕಾದಲ್ಲಿ ನಿಮ್ಮ ಜಿಎಸ್ಟಿಎನ್ ಸಂಖ್ಯೆಯನ್ನೂ ಸಲ್ಲಿಸಬಹುದಾಗಿದೆ.
6. ಕ್ಯಾಪ್ಚಾ ಸಲ್ಲಿಸುವ ಮೂಲಕ ನೀವು ಸಲ್ಲಿಸಿದ ವಿವರವನ್ನು ಖಾತ್ರಿ ಮಾಡಿಕೊಳ್ಳಿ.
7. ಈಗ ನಿಮ್ಮ ಇ-ಮೇಲ್ ವಿಳಾಸಕ್ಕೆ ಹಾಗೂ ನೋಂದಾಯಿತ ದೂರವಾಣಿ ಸಂಖ್ಯೆಗೆ ಲಿಂಕ್ ಒಂದನ್ನು ಪಡೆಯಲಿದ್ದೀರಿ.
8. ನಿಮ್ಮ ಇ-ಮೇಲ್ ವಿಳಾಸ ಹಾಗೂ ದೂರವಾಣಿ ಸಂಖ್ಯೆ ಖಾತ್ರಿ ಪಡಿಸಲು ಓಟಿಪಿ ಸಲ್ಲಿಸಿ.
ಈ ಪಕ್ರಿಯೆಗಳೆಲ್ಲಾ ಮುಗಿದ ಮೇಲೆ ನಿಮ್ಮ ಇ-ಪಾನ್ ಡೌನ್ಲೋಡ್ ಆಗಲು ಶುರುವಾಗುತ್ತದೆ.