ದೆಹಲಿ: ಹಿರಿಯ ಗಾಯಕ ಮತ್ತು ಸಂಗೀತ ಸಂಯೋಜಕ ದಿವಂಗತ ಖಯ್ಯಾಮ್ ಅವರ ಪತ್ನಿ ಜಗಜಿತ್ ಕೌರ್ (93) ನಿಧನರಾಗಿದ್ದಾರೆ.
ದಿವಂಗತ ಸಂಗೀತ ಸಂಯೋಜಕ ಮೊಹಮ್ಮದ್ ಜಹೂರ್ ಖಯ್ಯಾಮ್ ಅವರ ಪತ್ನಿ ಜಗಜಿತ್ ಕೌರ್ ಅವರು ಮುಂಬೈನ ತಮ್ಮ ನಿವಾಸದಲ್ಲಿ ಬೆಳಿಗ್ಗೆ 6 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು. ಇವರ ಅಂತ್ಯಸಂಸ್ಕಾರವನ್ನು ಭಾನುವಾರ ಮುಂಜಾನೆ ಮುಂಬೈನ ಎಸ್ವಿ ರೋಡ್ ವಿಲೆ ಪಾರ್ಲೆಯ ಪವನ್ ಹನ್ಸ್ ಸ್ಮಶಾನದಲ್ಲಿ ನೆರವೇರಿಸಲಾಯಿತು.
ಜಗಜಿತ್ ಕೌರ್ ತನ್ನ ಸಂಗೀತ ವೃತ್ತಿ ಜೀವನವನ್ನು 50 ರ ದಶಕದಲ್ಲಿ ಆರಂಭಿಸಿದರು. ಪೋಸ್ತಿ ಮತ್ತು ದಿಲ್-ಎ-ನಾದನ್ ನಂತಹ ಚಿತ್ರಗಳಿಗೆ ಹಾಡುಗಳನ್ನು ಹಾಡಿದ್ದಾರೆ. 1954 ರಲ್ಲಿ ಖಯ್ಯಾಮ್ ಅವರನ್ನು ವಿವಾಹವಾದರು. 1981 ರಲ್ಲಿ ಉಮರಾವ್ ಜಾನ್ ಅವರ ಖಯ್ಯಾಮ್ ಸಂಯೋಜನೆಯ ಸ್ಮರಣೀಯ ಧ್ವನಿಪಥದಲ್ಲಿ ಹಾಡು ಹಾಡಿದರು. ಕೌರ್ ಪತಿ ಖಯ್ಯಾಮ್ 2019ರಲ್ಲಿ ತಮ್ಮ 92ನೇ ವಯಸ್ಸಿನಲ್ಲಿ ಮುಂಬೈನಲ್ಲಿ ನಿಧನ ಹೊಂದಿದ್ದರು.
ತಮ್ಮ 17 ನೇ ವಯಸ್ಸಿನಲ್ಲಿ ಸಂಗೀತ ವೃತ್ತಿ ಆರಂಭಿಸಿದ ಖಯ್ಯಾಮ್, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಪದ್ಮಭೂಷಣಕ್ಕೂ ಭಾಜನರಾಗಿದ್ದರು. ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಮತ್ತು ಫಿಲ್ಮ್ ಫೇರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರ ಇತರ ಗಮನಾರ್ಹ ಕೃತಿಗಳಲ್ಲಿ ತ್ರಿಶೂಲ್, ನೂರಿ ಮತ್ತು ಶೋಲಾ ಔರ್ ಶಬ್ನಮ್ ಮುಂತಾದ ಚಿತ್ರಗಳು ಸೇರಿವೆ. ಅವರು ನಟಿ ಮೀನಾ ಕುಮಾರಿ ಅವರ ಆಲ್ಬಂಗೂ ಸಂಗೀತ ಸಂಯೋಜಿಸಿದ್ದರು.