ನವದೆಹಲಿ: ಹಳೆಯ ಡೀಸೆಲ್ ವಾಹನ ನೋಂದಣಿ ರದ್ದು ಆದೇಶ ಮಾರ್ಪಾಡು ಇಲ್ಲವೆಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(NGT) ತಿಳಿಸಿದೆ.
ದೆಹಲಿ –ಎನ್.ಸಿ.ಆರ್. ಪ್ರದೇಶದಲ್ಲಿ 10 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನಗಳ ನೋಂದಣಿ ರದ್ದು ಮಾಡಿದ್ದು ಈ ಆದೇಶ ಪರಿಷ್ಕರಣೆ ಮಾಡಬೇಕೆಂದು ಸಲ್ಲಿಸಿದ್ದ ಮನವಿಯನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ತಿರಸ್ಕರಿಸಿದೆ. ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯಲ್ ಅವರ ನೇತೃತ್ವದ ನ್ಯಾಯಾಧಿಕರಣ ಅರ್ಜಿಯನ್ನು ತಿರಸ್ಕರಿಸಿದ್ದು, ಈ ಸಂಬಂಧದ ಮನವಿಯನ್ನು ಸುಪ್ರೀಂಕೋರ್ಟ್ ಕೂಡ ತಿರಸ್ಕರಿಸಿರುವುದನ್ನು ಪ್ರಸ್ತಾಪಿಸಿದೆ.
2015 ರ ಏಪ್ರಿಲ್ 7 ರಂದು ದೆಹಲಿ – ಎನ್.ಸಿ.ಆರ್. ಪ್ರದೇಶದಲ್ಲಿ 10 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನಗಳ ನೋಂದಣಿ ರದ್ದು ಮಾಡುವಂತೆ ಆದೇಶ ನೀಡಲಾಗಿದೆ. ಈ ಆದೇಶದ ವಿರುದ್ಧ ಸಲ್ಲಿಕೆಯಾಗಿದ್ದ ಮೇಲ್ಮನವಿಯನ್ನು 2016 ರಲ್ಲಿ ಸುಪ್ರೀಂಕೋರ್ಟ್ ನಲ್ಲಿ ತಳ್ಳಿ ಹಾಕಲಾಗಿದೆ. ಮತ್ತೆ ಈಗ ಆದೇಶ ವಿಮರ್ಶೆ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಾಧಿಕರಣ ತಿಳಿಸಿದೆ.