alex Certify ಬಡ ಚಾಲಕನಿಗೆ ದಂಡ ವಿಧಿಸಿದರೂ ಮಾನವೀಯತೆ ಮೆರೆದ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಡ ಚಾಲಕನಿಗೆ ದಂಡ ವಿಧಿಸಿದರೂ ಮಾನವೀಯತೆ ಮೆರೆದ ಪೊಲೀಸ್

ಟ್ರಾಫಿಕ್​ ರೂಲ್ಸ್ ಉಲ್ಲಂಘಿಸಿದವರಿಗೆ ಸಂಚಾರಿ ಠಾಣೆ ಪೊಲೀಸರು ದಂಡ ವಿಧಿಸೋದು ಸಾಮಾನ್ಯ ವಿಚಾರ. ಆದರೆ ನಾಗ್ಪುರದ ಸೀತಾಬುಲ್ಡಿ ಟ್ರಾಫಿಕ್​ ವಲಯದ ಪೊಲೀಸ್​ ಅಧಿಕಾರಿ ಮಾತ್ರ ವಾಹನ ಸವಾರರೊಬ್ಬರ ದಂಡವನ್ನು ತಾವೇ ಭರಿಸುವ ಮೂಲಕ ಮಾನವೀಯತೆ ತೋರಿದ್ದಾರೆ.

ಸಂಚಾರಿ ನಿಯಮವನ್ನು ಉಲ್ಲಂಘಿಸಿದ್ದ ಆಟೋ ರಿಕ್ಷಾ ಚಾಲಕ ತನ್ನ ಪುತ್ರ ಕೂಡಿಟಿದ್ದ 2000 ರೂಪಾಯಿ ಹಣವನ್ನು ದಂಡ ಪಾವತಿ ಮಾಡಲು ತಂದಿದ್ದರು. ಈ ಹಣವನ್ನು ಸ್ವೀಕರಿಸದ ಹಿರಿಯ ಪೊಲೀಸ್​ ಅಧಿಕಾರಿ ಅಜಯ್​ ಮಾಳವಿಯಾ ದಂಡದ ಮೊತ್ತವನ್ನು ತಾವೇ ಭರ್ತಿ ಮಾಡಿ ಇನ್ಮುಂದೆ ಸಂಚಾರಿ ನಿಯಮವನ್ನು ಪಾಲಿಸುವಂತೆ ಸಲಹೆ ನೀಡಿದ್ರು.

ಪಾರ್ಕಿಂಗ್​ ಅಲ್ಲದ ಜಾಗದಲ್ಲಿ ಆಟೋವನ್ನು ನಿಲ್ಲಿಸಿದ್ದ ಕಾರಣಕ್ಕೆ ಸಂಚಾರಿ ಠಾಣೆ ಪೊಲೀಸರು ಆಟೋಚಾಲಕ ರಾಕೇಶ್​ ಖಡ್ಸೆಗೆ ಆಗಸ್ಟ್ 7 ಹಾಗೂ​ 8ನೇ ತಾರೀಖಿನಂದು ದಂಡ ವಿಧಿಸಿದ್ದರು. ಇದಕ್ಕೂ ಮೊದಲು ಅಂದರೆ ಕಳೆದ ವರ್ಷ ಡಿಸೆಂಬರ್​ 30ರಂದು ಸಮವಸ್ತ್ರ ಧರಿಸದ ಕಾರಣ ಹಾಗೂ ಲೈಸೆನ್ಸ್ ಕಾರಣಕ್ಕೂ ದಂಡ ವಿಧಿಸಲಾಗಿತ್ತು. ಎಲ್ಲಾ ಸೇರಿ ದಂಡದ ಮೊತ್ತ 2 ಸಾವಿರ ರೂಪಾಯಿ ಆಗಿತ್ತು.

ಆದರೆ ರಾಕೇಶ್​ ಯಾವುದೇ ದಂಡದ ಮೊತ್ತವನ್ನು ಪಾವತಿಸಿರಲಿಲ್ಲ. ಹೀಗಾಗಿ ಸೀತಾಬುಲ್ಡಿ ಟ್ರಾಫಿಕ್​ ಠಾಣೆ ಪೊಲೀಸರು ಆಟೋವನ್ನು ವಶಕ್ಕೆ ಪಡೆದಿದ್ದರು. ಇವರ ಜೀವನೋಪಾಯವೇ ಆಟೋ ಆಗಿದ್ದರಿಂದ ಪುತ್ರನ ಪಿಗ್ಗಿ ಬ್ಯಾಂಕ್​ ಒಡೆದು ರಾಕೇಶ್​ ಹಣವನ್ನು ತಂದಿದ್ದರು ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...