ಬೆಂಗಳೂರು: ಪೊಲೀಸ್ ಇಲಾಖೆ ನೇಮಕಾತಿಯಲ್ಲಿ ಶೇಕಡ 2 ರಷ್ಟು ಸ್ಪೋರ್ಟ್ಸ್ ಕೋಟಾದಡಿ ಅವಕಾಶ ನೀಡಲಾಗುವುದು.
ನೂತನ ಗೃಹ ಸಚಿವ ಆರೋಗ್ಯ ಜ್ಞಾನೇಂದ್ರ ಅಧಿಕಾರವಹಿಸಿಕೊಂಡ ಬಳಿಕ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗುತ್ತಿದ್ದು, ನೇಮಕಾತಿಯಲ್ಲಿ ಕ್ರೀಡಾ ಕೋಟಾದಡಿ ಶೇಕಡ 2 ರಷ್ಟು ಮೀಸಲಾತಿ ನೀಡಲಾಗುವುದು ಎನ್ನಲಾಗಿದೆ.
ಡಿಜಿ ಐಜಿಪಿ ಪ್ರವೀಣ್ ಸೂದ್ ಈ ಬಗ್ಗೆ ಮಾಹಿತಿ ನೀಡಿದ್ದು, ಹಲವು ವರ್ಷಗಳ ಬೇಡಿಕೆಯಂತೆ ನೇಮಕಾತಿಯಲ್ಲಿ ಸ್ಪೋರ್ಟ್ಸ್ ಕೋಟಾ ನೀಡಲು ಶೀಘ್ರವೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಲಾಗಿದೆ.