ಪ್ರೇಮಪಾಶದಲ್ಲಿ ಬಿದ್ದವರಿಗೆ ವಯಸ್ಸು ಎಂದಿಗೂ ಲೆಕ್ಕವಲ್ಲ ಎಂಬ ಮಾತು ಪದೇ ಪದೇ ಸಾಬೀತಾಗುತ್ತಲೇ ಬಂದಿದೆ. ಇಂಥ ಮತ್ತೊಂದು ನಿದರ್ಶನದಲ್ಲಿ 61 ವರ್ಷದ ಮಹಿಳೆಯೊಬ್ಬರು 24 ವರ್ಷದ ಯುವಕನೊಂದಿಗೆ ಪ್ರೇಮದಲ್ಲಿ ಬಿದ್ದಿದ್ದಾರೆ.
17 ಮೊಮ್ಮಕ್ಕಳನ್ನು ಹೊಂದಿರುವ 61 ವರ್ಷದ ಚೆರಿಲ್ ಮ್ಯಾಕ್‌ಗ್ರಗರ್ ಈ ಕಥೆಯ ಹೀರೋಯಿನ್. 24 ವರ್ಷದ ಕುರಾಣ್ ಮ್ಯಾಕೇಯ್ನ್ ಈ ಕಥೆಯ ಹೀರೋ. ಇಬ್ಬರ ನಡುವೆ 37 ವರ್ಷಗಳ ವಯಸ್ಸಿನ ಅಂತರವಿದೆ.
ಪ್ರತಿದಿನ ಈ ಮುದ್ರೆ ಮಾಡುವುದರಿಂದ ದೂರವಾಗುತ್ತೆ ಕೋಪ
ಇಬ್ಬರೂ ಮೊದಲ ಬಾರಿಗೆ ಭೇಟಿಯಾದಾಗ ಮ್ಯಾಕ್ ಗೆ ಬರೀ 15 ವರ್ಷ ವಯಸ್ಸು. ಮ್ಯಾಕ್ ಬೆಳೆಯುತ್ತಾ ಸಾಗಿದಂತೆ ಈಕೆಯ ಮೇಲೆ ಆತನಿಗೆ ಪ್ರೇಮದ ಸೆಳೆತ ಮೂಡಿ ಮೊಳೆಯತೊಡಗಿದೆ. ಸದ್ಯಕ್ಕೆ ಎಂಗೇಜ್ ಆಗಿರುವ ಇಬ್ಬರೂ ಟಿಕ್‌ಟಾಕ್‌ನಲ್ಲಿ ಜೊತೆಯಾಗಿ ಸಾಕಷ್ಟು ವಿಡಿಯೋಗಳನ್ನು ಶೂಟ್ ಮಾಡಿಕೊಂಡು ಜಾಲಿಯಾಗಿದ್ದಾರೆ.