ಅನಸ್ತೇಷಿಯಾ ತೆಗೆದುಕೊಳ್ಳದೇ ಐದು ಕೆಜಿ ತೂಗುವ ಮಗುವಿಗೆ ಜನ್ಮವಿತ್ತ ಚಾಸಿಟಿ ವಾರ್ಡ್ ಹೆಸರಿನ ಮಹಿಳೆಯೊಬ್ಬರು ತಮಗಾದ ನೋವಿನ ಅನುಭವವನ್ನು ಹಂಚಿಕೊಂಡಿದ್ದಾರೆ.
41 ವಾರಗಳ ಬಳಿಕ ಜನಿಸಿದ ಈ ಹೆಣ್ಣುಮಗು ಐದು ಕೆಜಿ ತೂಕವಿದ್ದು, ಅದರ ಫೋಟೋಗಳನ್ನು ಚಾಸಿಟಿ ಶೇರ್ ಮಾಡಿಕೊಂಡಿದ್ದಾರೆ.
ಪ್ರತಿದಿನ ಈ ಮುದ್ರೆ ಮಾಡುವುದರಿಂದ ದೂರವಾಗುತ್ತೆ ಕೋಪ
“ಅಲರ್ಜಿ ಕಾರಣದಿಂದಾಗಿ ಅನಸ್ತೇಷಿಯಾ ತೆಗೆದುಕೊಳ್ಳದೇ ಈ ದೊಡ್ಡ ಮಗುವಿಗೆ ಜನ್ಮ ನೀಡುವಾಗ ಯಮಯಾತನೆಯಾಗಿದೆ. ಈ ಚಿತ್ರಗಳನ್ನು ನಾವು ಆಸ್ಪತ್ರೆಯಲ್ಲಿದ್ದಾಗ ಸೆರೆ ಹಿಡಿಯಲಾಗಿದೆ. ನಾವು ಅಂದುಕೊಂಡದ್ದಕ್ಕಿಂತ ಮಗಳು ಬಹಳ ದೊಡ್ಡದಾಗಿದ್ದು, ನಾನು ಬಹಳ ಸಣ್ಣ ಗಾತ್ರದವಳಾಗಿದ್ದೇನೆ” ಎಂದು ಚಾಸಿಟಿ ತಮ್ಮ ಪ್ರಸವದ ಅನುಭವ ಹಂಚಿಕೊಂಡಿದ್ದಾರೆ.