ರಾಷ್ಟ್ರೀಯ ಆಟೋಮೊಬೈಲ್ ಸ್ಕ್ರಾಪೇಜ್ ನೀತಿಗೆ ಕೇಂದ್ರ ಸರ್ಕಾರ ಆಗಸ್ಟ್ 13ರಂದು ಚಾಲನೆ ಕೊಟ್ಟಿದೆ.
ಗುಜರಾತ್ನಲ್ಲಿ ಹೂಡಿಕೆದಾರರ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, “ಸ್ಕ್ರಾಪೇಜ್ ನೀತಿಯು ದೇಶದ ಆಟೋಮೊಬೈಲ್ ಕ್ಷೇತ್ರಕ್ಕೆ ಹೊಸ ಗುರುತು ನೀಡಲಿದೆ. ಆತ್ಮನಿರ್ಭರ ಭಾರತ ನಿರ್ಮಾಣದಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಲಿದೆ. ಕೆಟ್ಟಸ್ಥಿತಿಯಲ್ಲಿರುವ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಲು ನೆರವಾಗಲಿರುವ ಈ ನೀತಿಯು ಆಟೋಮೊಬೈಲ್ ಮಾತ್ರವಲ್ಲದೇ ಎಲ್ಲಾ ಕ್ಷೇತ್ರಗಳಲ್ಲೂ ಮಹತ್ವದ ಬದಲಾವಣೆ ತರಲಿದೆ” ಎಂದಿದ್ದಾರೆ.
2021ರ ಬಜೆಟ್ ಭಾಷಣದ ವೇಳೆ ರಾಷ್ಟ್ರೀಯ ಆಟೋಮೊಬೈಲ್ ಸ್ಕ್ರಾಪೇಜ್ ನೀತಿಯ ಬಗ್ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೊದಲ ಬಾರಿಗೆ ಘೋಷಿಸಿದ್ದರು.
ಮಳೆಹಾನಿ ಸಂತ್ರಸ್ಥರಿಗೆ ಪರಿಹಾರ ಘೋಷಣೆ: ಮನೆ ಹಾನಿಗೆ 5 ಲಕ್ಷ ರೂ., ಬಟ್ಟೆಬರೆ ಹಾನಿಗೆ 10 ಸಾವಿರ ರೂ.
ಖಾಸಗಿ ಹಾಗೂ ವಾಣಿಜ್ಯ ವಾಹನಗಳು ಕ್ರಮವಾಗಿ 20 ಹಾಗೂ 15 ವರ್ಷಗಳಷ್ಟು ಹಳೆಯದಾದ ಮೇಲೆ ಫಿಟ್ನೆಸ್ ಪರೀಕ್ಷೆಗೆ ಒಳಪಡುವುದನ್ನು ಕಡ್ಡಾಯಗೊಳಿಸುವ ಈ ನೀತಿಯು ಹೀಗೆ ಮಾಡದೇ ಇದ್ದಲ್ಲಿ ಅಂಥ ವಾಹನಗಳ ನೋಂದಣಿ ರದ್ದು ಮಾಡಲು ಅವಕಾಶ ನೀಡುತ್ತದೆ.
ತಮ್ಮ ವಾಹನವನ್ನು ಸ್ಕ್ರಾಪ್ ಮಾಡುವ ಮಾಲೀಕರಿಗೆ ಸ್ಕ್ರಾಪಿಂಗ್ ಪ್ರಮಾಣಪತ್ರ ಕೊಡಲಾಗುತ್ತದೆ. ಈ ಪ್ರಮಾಣಪತ್ರ ಬಳಸಿಕೊಂಡು ಹೊಸ ವಾಹನದ ಖರೀದಿ ವೇಳೆ 5-6% ರಿಯಾಯಿತಿ ಪಡೆಯಬಹುದಾಗಿದೆ.
ಹಳೆಯ ಕಾರು ಸ್ಕ್ರಾಪ್ ಮಾಡಿದ ಪ್ರಮಾಣ ಪತ್ರ ತೋರಿದಲ್ಲಿ ಹೊಸ ವಾಹನಕ್ಕೆ ಕಟ್ಟುವ ರಸ್ತೆ ತೆರಿಗೆಯಲ್ಲಿ 25% ರಿಯಾಯಿತಿ ಪಡೆಯಬಹುದಾಗಿದೆ.