alex Certify ʼಓಣಂʼ ಭೋಜನದ ಜಾಹೀರಾತು ತೋರಿ ಪೇಚಿಗೆ ಸಿಲುಕಿದ ಕಂಪನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಓಣಂʼ ಭೋಜನದ ಜಾಹೀರಾತು ತೋರಿ ಪೇಚಿಗೆ ಸಿಲುಕಿದ ಕಂಪನಿ

ಸುಗ್ಗಿ ಹಬ್ಬವಾದ ಓಣಂ ಅನ್ನು ಜಗತ್ತಿನಾದ್ಯಂತ ಮಲೆಯಾಳಿ ಸಮುದಾಯ ಅದ್ಧೂರಿಯಾಗಿ ಆಚರಿಸುತ್ತದೆ. ಮಲಯಾಳಂ ಹೊಸ ವರ್ಷದ ಸಂಕೇತವಾದ ಈ ಹಬ್ಬವನ್ನು ಹತ್ತು ದಿನಗಳ ಕಾಲ ಆಚರಿಸಲಾಗುತ್ತದೆ.

ಈ ವೇಳೆ ಅತ್ಯಂತ ಜನಪ್ರಿಯವಾದ ಸಂಪ್ರದಾಯವೆಂದರೆ ಅದು ’ಸದ್ಯ’ ಭೋಜನ. ಸಾಂಪ್ರದಾಯಿಕ ಶೈಲಿಯಲ್ಲಿ ಅನೇಕ ರೀತಿಯ ಭಕ್ಷ್ಯಗಳನ್ನು ಬಾಳೆ ಎಲೆ ಮೇಲೆ ಹರಡಿಕೊಂಡು ಹಬ್ಬದೂಟ ಸವಿಯುವುದು ಮಲೆಯಾಳಿಗಳಿಗೆ ಭಾರೀ ಅಚ್ಚುಮೆಚ್ಚಿನ ಕೆಲಸ.

’ಕಾಟನ್ಸ್‌ ಜೈಪುರ್‌’ ಹೆಸರಿನ ಉಡುಪುಗಳ ಬ್ರಾಂಡ್ ಒಂದು ಓಣಂ ಸಂಗ್ರಹದ ವಸ್ತ್ರಗಳನ್ನು ಹೊರತಂದಿದ್ದು, ಅದನ್ನು ಪ್ರಮೋಟ್ ಮಾಡುವ ವೇಳೆ ಕೆಲವೊಂದು ಎಡವಟ್ಟುಗಳನ್ನು ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಟೀಕೆಗೆ ಗುರಿಯಾಗಿದೆ.

ಚಾರ್ಮಾಡಿ ಘಾಟ್ ಮೂಲಕ ಸಂಚರಿಸುವವರೇ ಗಮನಿಸಿ, ಭಾರಿ ವಾಹನಗಳಿಗೆ ನಿರ್ಬಂಧ

ಬಿಳಿ ಹಾಗೂ ಚಿನ್ನದ ಬಣ್ಣದ ಸಲ್ವಾರ್‌ ಸೂಟ್‌ ಧರಿಸಿದ ಮಾಡೆಲ್‌ ಗಳಿಬ್ಬರು ಇಡ್ಲಿ ಹಾಗೂ ದೋಸೆಯನ್ನು ಸಾಂಬಾರಿನಲ್ಲಿ ಅದ್ದಿ ತಿನ್ನುವ ಚಿತ್ರವನ್ನು ಬ್ರಾಂಡ್ ಬಳಸಿದೆ. ದೋಸೆ ಹಾಗೂ ಇಡ್ಲಿಗಳು ಓಣಂ ಭೋಜನದ ಭಾಗವಲ್ಲ ಎಂದು ನೆಟ್ಟಿಗರು ತಿಳಿಸಿದ್ದಾರೆ.

ಓಣಂ ಥೀಂನಲ್ಲಿ ವಸ್ತ್ರಗಳನ್ನು ಪ್ರಮೋಟ್ ಮಾಡುವಾಗ ಈ ಹಬ್ಬದೂಟದ ಬಗ್ಗೆ ಅರಿಯದೇ ಇದ್ದರೆ ಹೇಗೆ ಎಂದು ನೆಟ್ಟಿಗರು ಕಾಟನ್ಸ್ ಜೈಪುರ್‌‌ ಬ್ರಾಂಡ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

https://www.facebook.com/cottonsjaipurKCPL/posts/410215014110237

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...