
ಕೊರೊನಾ ಸಂದರ್ಭದಲ್ಲಿ ಅನೇಕ ಪಾಲಕರು ತಮ್ಮ ಮಕ್ಕಳ ಶಾಲೆ ಅಡ್ಮಿಷನ್ ಮಾಡಿಸಿಲ್ಲ. ಅಂತವರಿಗೆ ಖುಷಿ ಸುದ್ದಿಯೊಂದಿದೆ. ಕೊರೊನಾ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರ, ಪಾಲಕರಿಗೆ ಖುಷಿ ಸುದ್ದಿ ನೀಡಿದೆ. 2021-22 ಶೈಕ್ಷಣಿಕ ವರ್ಷದಲ್ಲಿ ಶಾಲೆಯ ಶುಲ್ಕವನ್ನು ಶೇಕಡಾ 15ರಷ್ಟು ಕಡಿತಗೊಳಿಸುವಂತೆ ಸೂಚನೆ ನೀಡಿದೆ. ಎಲ್ಲ ಖಾಸಗಿ ಶಾಲೆಗಳಿಗೆ ಈ ಸೂಚನೆ ನೀಡಲಾಗಿದೆ.
ಮಹಾರಾಷ್ಟ್ರ ಸರ್ಕಾರದ ಈ ನಿರ್ಧಾರವನ್ನು ಶಾಲೆಗಳು ಖಂಡಿಸಿವೆ. ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಕೋರ್ಟ್ ಗೆ ಹೋಗಲು ಮುಂದಾಗಿವೆ. ಮಕ್ಕಳ ಶಾಲೆಗೆ ವಾರ್ಷಿಕ ಶುಲ್ಕವಾಗಿ 10000 ರೂಪಾಯಿ ಪಾವತಿಸುತ್ತಿದ್ದರೆ ಇದರಲ್ಲಿ ಶೇಕಡಾ 15 ರಷ್ಟು ರಿಯಾಯಿತಿ ನೀಡಲಾಗುವುದು. ಅಂದ್ರೆ ಪಾಲಕರು ಕೇವಲ 8500 ರೂಪಾಯಿಗಳನ್ನು ಜಮಾ ಮಾಡಬೇಕಾಗುತ್ತದೆ.
ಒಂದು ವೇಳೆ ಈಗಾಗಲೇ ಶಾಲೆಗೆ ಹಣ ಪಾವತಿಯಾಗಿದ್ದರೆ ಅಂಥವರಿಗೆ ಮುಂದಿನ ವರ್ಷ ರಿಯಾಯಿತಿ ನೀಡಬೇಕಾಗುತ್ತದೆ ಎಂದು ಸರ್ಕಾರ ಹೇಳಿದೆ. ಸರ್ಕಾರದ ಈ ನಿರ್ಧಾರದಿಂದ ಪಾಲಕರು ಖುಷಿಯಾಗಿದ್ದಾರೆ. ಆದ್ರೆ ಶಾಲೆ ಆಡಳಿತ ಮಂಡಳಿಗಳು ಅಸಮಾಧಾನಗೊಂಡಿವೆ.