ವಿಶ್ವದಲ್ಲಿ ಅತ್ಯದ್ಭುತ ವಿಮಾನ ನಿಲ್ದಾಣಗಳಿವೆ. ಅವುಗಳ ವಿವರ ಇಲ್ಲಿದೆ. ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣ, ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಎಂದು ಪ್ರಸಿದ್ಧಿಯಾಗಿದೆ. ಈ ಚಾಂಗಿ ವಿಮಾನ ನಿಲ್ದಾಣ ಸತತ ಎಂಟು ವರ್ಷಗಳ ಕಾಲ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಪ್ರಶಸ್ತಿಯನ್ನು ಗೆದ್ದಿದೆ. ಆದರೆ ಈಗ ಇದು ಮೂರನೇ ಸ್ಥಾನಕ್ಕೆ ಕುಸಿದಿದೆ. ಸ್ಕೈಟ್ರಾಕ್ಸ್ನ ವಾರ್ಷಿಕ ಶ್ರೇಯಾಂಕದಲ್ಲಿ, ಹಮದ್ ವಿಮಾನ ನಿಲ್ದಾಣವು ವಿಶ್ವದ ದಿ ಬೆಸ್ಟ್ ವಿಮಾನ ನಿಲ್ದಾಣ ಎಂದು ಪ್ರಶಸ್ತಿ ಪಡೆದಿದೆ.
ಹಮದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು 16 ಶತಕೋಟಿಗಿಂತ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ವಿಮಾನ ನಿಲ್ದಾಣ 5400 ಹೆಕ್ಟೇರ್ ಎಕರೆಯಲ್ಲಿ ನಿರ್ಮಿಸಲಾಗಿದೆ.
ಟೋಕಿಯೊ ಹನೆಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದು. ವಿಶ್ವದ ಎರಡನೇ ಅತ್ಯುತ್ತಮ ವಿಮಾನ ನಿಲ್ದಾಣದ ಪಟ್ಟ ಪಡೆದಿದೆ. ಈ ವಿಮಾನ ನಿಲ್ದಾಣವು ಶುಚಿತ್ವ ಮತ್ತು ಶಾಪಿಂಗ್ ಸೌಲಭ್ಯಗಳಿಗಾಗಿ ಬಹಳ ಜನಪ್ರಿಯವಾಗಿದೆ. ಟೋಕಿಯೋ ವಿಮಾನ ನಿಲ್ದಾಣವು ಸ್ಕೈಟ್ರಾಕ್ಸ್ ನ ವಾರ್ಷಿಕ ಶ್ರೇಯಾಂಕದಲ್ಲಿ ಸ್ವಚ್ಛತೆಯ ವಿಭಾಗದಲ್ಲಿ ವಿಶ್ವದಲ್ಲೇ ಮೊದಲ ಸ್ಥಾನ ಪಡೆದಿದೆ.
ಇಂಚಿಯಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ದಕ್ಷಿಣ ಕೊರಿಯಾದಲ್ಲಿದೆ. ವಿಶ್ವದ ನಾಲ್ಕನೇ ಅತ್ಯುತ್ತಮ ವಿಮಾನ ನಿಲ್ದಾಣವಾಗಿದೆ. ಸಿಯೋಲ್ನ ಹೊರಗಿನ ದ್ವೀಪದಲ್ಲಿರುವ ಈ ವಿಮಾನ ನಿಲ್ದಾಣವು ಶಾಪಿಂಗ್ ಮತ್ತು ಊಟದ ಸೌಲಭ್ಯ ಹೊಂದಿದೆ. ಪ್ರವಾಸಿಗರನ್ನು ರಂಜಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಾಗುತ್ತದೆ. ವಿಮಾನ ನಿಲ್ದಾಣದ ಒಳಗೆ ಕೊರಿಯನ್ ಸಾಂಸ್ಕೃತಿಕ ವಸ್ತು ಸಂಗ್ರಹಾಲಯವೂ ಇದೆ.
ನಾರಿತಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಟೋಕಿಯೊ ಅತ್ಯುತ್ತಮ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಇದೂ ಸೇರಿದೆ. ಇದನ್ನು ನಾರಿತಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಕರೆಯಲಾಗುತ್ತದೆ. ಇದು ವಿಶ್ವದ ಐದನೇ ಅತ್ಯುತ್ತಮ ವಿಮಾನ ನಿಲ್ದಾಣವಾಗಿದೆ.
ಮ್ಯೂನಿಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಜರ್ಮನಿಯಲ್ಲಿದೆ. ವಿಶ್ವದ ಆರನೇ ಅತ್ಯುತ್ತಮ ವಿಮಾನ ನಿಲ್ದಾಣವಾಗಿದೆ. ಇದರ ಹೊರತಾಗಿ, ಮ್ಯೂನಿಚ್ ವಿಮಾನ ನಿಲ್ದಾಣವು ಸ್ಕೈಟ್ರಾಕ್ಸ್ ನ ವಾರ್ಷಿಕ ಶ್ರೇಯಾಂಕದಲ್ಲಿ ಯುರೋಪಿನ ಅತ್ಯುತ್ತಮ ವಿಮಾನ ನಿಲ್ದಾಣವಾಗಿ ಆಯ್ಕೆಯಾಗಿದೆ.