ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾಗೆ ಬಹುಮಾನಗಳ ಸುರಿಮಳೆಯೇ ಹರಿದುಬಂದಿದೆ. ಟೋಕ್ಯೋ ಕೂಟದ ಜಾವೆಲಿನ್ ಎಸೆತದಲ್ಲಿ ಚಿನ್ನ ಜಯಿಸಿದ ನೀರಜ್‌ಗೆ ಘೋಷಿಸಲ್ಪಟ್ಟ ನಗದು ಬಹುಮಾನದ ವಿವರಗಳು ಇಂತಿವೆ:
ಹರಿಯಾಣಾ ಮುಖ್ಯಮಂತ್ರಿಯಿಂದ: 6 ಕೋಟಿ ರೂಪಾಯಿ. ಪಂಚಕುಲಾದಲ್ಲಿ ನಿರ್ಮಾಣವಾಗಲಿರುವ ಅಥ್ಲೆಟಿಕ್ಸ್ ತರಬೇತಿ ಕೇಂದ್ರದ ಮುಖ್ಯಸ್ಥರನ್ನಾಗಿ ನೀರಜ್‌ರನ್ನು ನೇಮಕ ಮಾಡಲಾಗಿದೆ.
ಬೆಚ್ಚಿಬಿದ್ದ ಬೆಣ್ಣೆನಗರಿ: ತಲೆ ಮೇಲೆ ಕಲ್ಲು ಎತ್ತಿಹಾಕಿ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ
ಪಂಜಾಬ್ ಮುಖ್ಯಮಂತ್ರಿಯಿಂದ: 2.51 ಕೋಟಿ ರೂಪಾಯಿ.
ಭಾರತೀಯ ಒಲಿಂಪಿಕ್ ಸಂಸ್ಥೆಯಿಂದ: 75 ಲಕ್ಷ ರೂಪಾಯಿ.
ಬಿಸಿಸಿಐನಿಂದ: ಒಂದು ಕೋಟಿ ರೂಪಾಯಿ.
ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ತಂಡದಿಂದ: ಒಂದು ಕೋಟಿ ರೂಪಾಯಿ. ಟೋಕ್ಯೋ ಗೇಮ್ಸ್‌ನಲ್ಲಿ ಚಿನ್ನದ ಪದಕ ತಂದಿಟ್ಟ ಎಸೆತದ ದೂರವಾದ 87.58 ಮೀಟರ್ ಸೂಚಕವಾಗಿ ನೀರಜ್ ಹೆಸರಿನಲ್ಲಿ 8758 ಸಂಖ್ಯೆಯ ವಿಶೇಷ ಜೆರ್ಸಿಯನ್ನು ಸಿಎಸ್‌ಕೆ ಹೊರತರಲಿದೆ.
ಇಂಡಿಗೋ ಏರ್‌ಲೈನ್ಸ್: ಒಂದು ವರ್ಷದ ಮಟ್ಟಿಗೆ ಅನಿಯಮಿತ ಉಚಿತ ಪ್ರಯಾಣ
ಎಲಾನ್ ರಿಯಾಲಿಟಿ ಸಮೂಹ: 25 ಲಕ್ಷ ರೂಪಾಯಿ
ಬೈಜೂಸ್‌ನಿಂದ: ಎರಡು ಕೋಟಿ ರೂಪಾಯಿ
ಓಯೋ: ಯಾವುದೇ ಓಯೋ ರೂಂನಲ್ಲಿ ಉಚಿತ ವಸತಿ