ತನ್ನ ಮಾಜಿ ಗರ್ಲ್‌ಫ್ರೆಂಡ್ ಜೊತೆಗೆ ಮಾತನಾಡಿದ ಎಂಬ ಕಾರಣಕ್ಕೆ 20 ವರ್ಷದ ಯುವಕ ಹಾಗೂ ಆತನ ಟೀನೇಜ್ ಸಂಗಡಿಗನೊಬ್ಬ ಸೇರಿಕೊಂಡು ವ್ಯಕ್ತಿಯೊಬ್ಬರಿಗೆ ಚಾಕುವಿನಲ್ಲಿ ಇರಿದ ಘಟನೆ ದೆಹಲಿಯ ಮಂಗೊಲ್ಪುರಿ ಪ್ರದೇಶದಲ್ಲಿ ಜರುಗಿದೆ.
ಈ ಸಂಬಂಧ ಅಶದ್ ಅಲಿಯಾಸ್ ಬಿಲ್ಲಾ ಹಾಗೂ ಆತನ ಅಪ್ರಾಪ್ತ ವಯಸ್ಸಿನ ಸ್ನೇಹಿತನನ್ನು ಆನಂದ್ ವಿಹಾರ್ ಬಸ್ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ದೆಹಲಿಯಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಅಶದ್ ಕೋವಿಡ್-19 ಲಾಕ್‌ಡೌನ್ ವೇಳೆ ತನ್ನ ಊರು ಕಾನ್ಪುರಕ್ಕೆ ಮರಳಿದ್ದಾನೆ. ಆ ವೇಳೆ ತನ್ನ ಗರ್ಲ್‌ಫ್ರೆಂಡ್ ಜೊತೆಗೆ ಬ್ರೇಕಪ್ ಆಗಿದೆ.
BIG BREAKING ಇಸ್ರೋ ಅತ್ಯಾಧುನಿಕ ಜಿಯೋ -ಇಮೇಜಿಂಗ್ ಉಪಗ್ರಹ ಉಡಾವಣೆ
ತನ್ನ ಮಾಜಿ ಪ್ರೇಯಸಿಯೊಂದಿಗೆ ಸೈಫ್ ಎಂಬಾತ ಸಂಪರ್ಕದಲ್ಲಿದ್ದಾನೆ ಎಂದು ಅರಿತ ಅಶದ್, ಜುಲೈನಲ್ಲಿ ದೆಹಲಿಗೆ ಆಗಮಿಸಿ ಆತನಿಗೆ ವಾರ್ನಿಂಗ್ ಮಾಡಿ ಹೋಗಿದ್ದಾನೆ. ಆದರೂ ಸಹ ತನ್ನ ಗರ್ಲ್‌ಫ್ರೆಂಡ್ ಜೊತೆಗೆ ಸಂಪರ್ಕದಲ್ಲಿರುವುದನ್ನು ಬಿಡದ ಸೈಫ್ ಮೇಲೆ ಬುಧವಾರ ಈ ರೀತಿಯಲ್ಲಿ ಸಿಟ್ಟು ತೀರಿಸಿಕೊಂಡಿದ್ದಾನೆ ಅಶದ್.
ಆಗಸ್ಟ್ 4ರಂದು ಸೈಫ್‌ನನ್ನು ಪಾರ್ಕ್ ಒಂದಕ್ಕೆ ಕರೆಸಿದ ಅಶದ್ ಹಾಗೂ ಆತನ ಸಂಗಡಿಗ ಅಲ್ಲಿ ಸೈಫ್ ಮೇಲೆ ಹಲ್ಲೆ ಮಾಡಿ, ಅಲ್ಲಿಂದ ಪರಾರಿಯಾಗಿದ್ದಾರೆ. ಅಪರಾಧಿಗಳ ಬೆನ್ನತ್ತಿದ ಪೊಲೀಸರು ಆಗ್ರಾ-ಕಾನ್ಪುರ-ಫತೇಪುರ ಹಾಗೂ ಲಖನೌಗಳನ್ನು ಹಾದು, 600 ಕಿಮೀ ಕ್ರಮಿಸಿ ಕೊನೆಗೂ ದೆಹಲಿ ಬಸ್ ಹತ್ತಿ ಬರುತ್ತಿದ್ದ ಅಪರಾಧಿಗಳ ಜಾಡು ಹಿಡಿದು ದೆಹಲಿಯಲ್ಲಿ ಅವರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.