ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಿದ್ದ ವೇಳೆಯೂ ಆನಂದ್ ಸಿಂಗ್ಗೆ ಸಾರಥ್ಯ ವಹಿಸಿದ್ದ ಶಾಸಕ ರಾಜು ಗೌಡ ಇದೀಗ ಖಾತೆ ಅಸಮಾಧಾನ ವಿಚಾರದಲ್ಲಿಯೂ ಆನಂದ್ ಸಿಂಗ್ಗೆ ಸಾರಥಿಯಾಗಿದ್ದಾರಾ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿದೆ. ಆನಂದ್ ಸಿಂಗ್ರ ಅಸಮಾಧಾನ ಶಮನಕ್ಕೆ ಸಿಎಂ ಬೊಮ್ಮಾಯಿ ರಾಜು ಗೌಡರ ಸಹಾಯ ಕೋರಿದ್ದಾರೆ ಎನ್ನಲಾಗಿದೆ.
ಆನಂದ್ ಸಿಂಗ್ರ ಭೇಟಿಗೆ ಸಿಎಂ ಬೊಮ್ಮಾಯಿ ಮುಂದಾದ ಹಿನ್ನೆಲೆಯಲ್ಲಿ ಆನಂದ್ ಸಿಂಗ್, ಶಾಸಕ ರಾಜು ಗೌಡರ ಜೊತೆಯಲ್ಲಿ ಜಿಂದಾಲ್ನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಆದರೆ ಆನಂದ್ ಸಿಂಗ್ರನ್ನು ಕರೆದುಕೊಂಡು ಬರುವ ಕೆಲಸವನ್ನು ಸಿಎಂ ಬೊಮ್ಮಾಯಿ, ರಾಜುಗೌಡರಿಗೆ ಏಕೆ ನೀಡಿದ್ರು ಅನ್ನೋದು ಸದ್ಯದ ಪ್ರಶ್ನೆಯಾಗಿದೆ.
ಆನಂದ್ ಸಿಂಗ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜೀನಾಮೆ ನೀಡಿದ್ದಾಗಲೂ ರಾಜು ಗೌಡ ಇವರ ಜೊತೆ ಕಾಣಿಸಿಕೊಂಡಿದ್ದರು. ಆನಂದ್ ಸಿಂಗ್ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವಾಗಲೂ ಇದೇ ರಾಜು ಗೌಡ ನೇತೃತ್ವ ವಹಿಸಿದ್ದರು. ಇದೀಗ ಆನಂದ್ ಸಿಂಗ್ ಖಾತೆ ಕ್ಯಾತೆ ಶಮನಕ್ಕೂ ರಾಜು ಗೌಡರನ್ನೇ ಬಿಜೆಪಿ ಮುಂದೆ ಬಿಟ್ಟಿದೆ. ಉಪಚುನಾವಣೆ ವೇಳೆ ಆನಂದ್ ಸಿಂಗ್ರನ್ನು ಎತ್ತಿನ ಗಾಡಿ ಮೇಲೆ ಕೂರಿಸಿಕೊಂಡು ಹೊರಟಿದ್ದ ರಾಜು ಗೌಡ ಇಂದು ಹೆಲಿಕಾಪ್ಟರ್ನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸುವಲ್ಲಿಯೂ ಆನಂದ್ ಸಿಂಗ್ ಜೊತೆ ನಿಂತಿದ್ದಾರೆ. ಈ ಮೂಲಕ ಕಲ್ಯಾಣ ಕರ್ನಾಟಕದ ಜೋಡಿ ಹಕ್ಕಿ ಎಂಬ ಬಿರುದನ್ನು ಈ ಜೋಡಿ ಮತ್ತೊಮ್ಮೆ ಸಾಬೀತು ಪಡಿಸಿದೆ.