ಬ್ರಿಟನ್ನ ಎತ್ತರದ ಶಿಖರಗಳಲ್ಲಿ ಒಂದಾದ ಸ್ನೋಡೋನಿಯಾದ ಕಡಿದಾದ 100 ಅಡಿ ಬಂಡೆಯ ಅಂಚಿನಲ್ಲಿ ನವ ದಂಪತಿ ಸಿಲುಕಿಕೊಂಡಿದ್ದು ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಇವರನ್ನ ರಕ್ಷಣೆ ಮಾಡಲು ಯಶಸ್ವಿಯಾಗಲಾಗಿದೆಯಾದರೂ ಸಹ ಸ್ಥಳೀಯರು ಇವರನ್ನು ಪರ್ವತ ಮೇಕೆಗಳು ಎಂದು ತಪ್ಪಾಗಿ ಭಾವಿಸಿದ ಪರಿಣಾಮ ಸಹಾಯಕ್ಕೆ ಧಾವಿಸುವುದರಲ್ಲಿ ವಿಳಂಬವಾಗಿದೆ ಎನ್ನಲಾಗಿದೆ.
ಬಂಡೆಯ ಅಂಚಿನಲ್ಲಿ ಸಿಲುಕಿಕೊಂಡಿದ್ದ ಈ ಜೋಡಿ ಸಹಾಯಕ್ಕಾಗಿ ಕೂಗುತ್ತಿದ್ದರು. ಈ ದಂಪತಿಯ ಧ್ವನಿಯನ್ನು ಕೇಳಿದ ಸ್ಥಳೀಯರು ಬಹುಶಃ ಮೇಕೆ ಈ ರೀತಿ ಶಬ್ದ ಮಾಡುತ್ತಿದೆ ಎಂದೇ ಭಾವಿಸಿದ್ದರಂತೆ. ಆದರೆ ಬಳಿಕ ಇದು ಪ್ರಾಣಿಗಳ ಧ್ವನಿಯಲ್ಲ ಬದಲಾಗಿ ಸಹಾಯಕ್ಕೆ ಅಂಗಲಾಚುತ್ತಿರುವ ಮನುಷ್ಯರ ಧ್ವನಿ ಎಂಬುದು ತಿಳಿದಿದೆ.
ಕುತ್ತಿಗೆ ಅಲುಗಾಡಿಸಲಾಗದ 7 ವರ್ಷದ ಬಾಲಕಿಗೆ ಮರು ಜೀವ ನೀಡಿದ ಸರ್ಜನ್ಗಳು…..!
ಇದಾದ ಬಳಿಕ 18 ಮಂದಿ ಸದಸ್ಯರನ್ನು ಹೊಂದಿದ್ದ ರಕ್ಷಣಾ ಪಡೆ ಸ್ಥಳಕ್ಕೆ ಧಾವಿಸಿತ್ತು. ಕೋಸ್ಟ್ಗಾರ್ಡ್ ಹೆಲಿಕಾಪ್ಟರ್ ಮೂಲಕ ಈ ಸ್ಥಳವನ್ನು ತಲುಪುವುದು ಅಸಾಧ್ಯವಾದ ಕಾರಣ ಈ 18 ಮಂದಿಯ ತಂಡವೇ ದಂಪತಿಯನ್ನು ರಕ್ಷಿಸಿದೆ. 6 ತಾಸುಗಳ ಕಾರ್ಯಾಚರಣೆಯ ಬಳಿಕ ದಂಪತಿಯನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.