ಲಂಚದ ದುಡ್ಡನ್ನು ವ್ಯವಸ್ಥಿತವಾಗಿ ಪಡೆಯಲು ರಸಗೊಬ್ಬರ ಮತ್ತು ಕೀಟನಾಶಕಗಳ ಅಂಗಡಿಗಳ ಮಾಲೀಕರೊಂದಿಗೆ ವಾಟ್ಸಾಪ್ ಗ್ರೂಪ್ ಸೃಷ್ಟಿಸಿದ್ದ ಕೃಷಿ ಇಲಾಖೆ ಅಧಿಕಾರಿಯೊಬ್ಬರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪ್ರಕರಣ ದಾಖಲಿಸಿದ ಘಟನೆ ತೆಲಂಗಾಣದ ಭದ್ರಾದ್ರಿ ಮೋತಗುಡೆಂ ಜಿಲ್ಲೆಯಲ್ಲಿ ಜರುಗಿದೆ.
ಇಲ್ಲಿನ ಚಂದ್ರುಗೊಂಡ ಮಂಡಲದಲ್ಲಿ ಕಳೆದ ಎಂಟು ವರ್ಷಗಳಿಂದ ಕೃಷಿ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ನರ್ಲಪತಿ ಮಹೇಶ್ ಚಂದೆರ್, ಮಾಸಿಕ ಪರಿಶೀಲನೆಗಳನ್ನು ತಪ್ಪಿಸಿಕೊಳ್ಳಬೇಕಾದಲ್ಲಿ ಪ್ರತಿಯೊಬ್ಬ ಅಂಗಡಿ ಮಾಲೀಕರೂ ತನಗೆ 15,000 ರೂಪಾಯಿ ಲಂಚ ನೀಡಬೇಕೆಂದು ವಾಟ್ಸಾಪ್ ಗ್ರೂಪ್ ಮುಖಾಂತರ ಬೇಡಿಕೆ ಇಡುತ್ತಿದ್ದ ಎಂದು ಎಸಿಬಿಯ ಡಿಎಸ್ಪಿ ಎಸ್ ವಿ ರಮಣ ಮೂರ್ತಿ ತಿಳಿಸಿದ್ದಾರೆ.
DRDO ನೇಮಕಾತಿ: 10 ನೇ ತರಗತಿ ವಿದ್ಯಾರ್ಹತೆ ಹೊಂದಿದವರಿಂದ ಅರ್ಜಿ ಆಹ್ವಾನ
ಗ್ರೂಪ್ನಲ್ಲಿದ್ದ ಆರು ಮಂದಿ ಈ ಬಗ್ಗೆ ಎಸಿಬಿಗೆ ದೂರು ಕೊಟ್ಟು ತಮಗೆ ಲಂಚ ನೀಡಲು ನರ್ಲಪತಿ ಕಿರುಕುಳ ಕೊಡುತ್ತಿದ್ದಾರೆ ಎಂದು ತಿಳಿಸಿದ್ದರು. ಇದಾದ ಬಳಿಕ ಪ್ಲಾನ್ ಒಂದನ್ನು ರೂಪಿಸಿ, ಈ ಆರೂ ಮಂದಿ 90,000 ರೂಪಾಯಿಗಳನ್ನು ನರ್ಲಪತಿಗೆ ಲಂಚ ಕೊಡುವ ವೇಳೆ ರೆಡ್ ಹ್ಯಾಂಡ್ ಆಗಿ ಆತನನ್ನು ಹಿಡಿದಿದ್ದಾರೆ ಎಸಿಬಿ ಅಧಿಕಾರಿಗಳು.
ಕೃಷಿ ಅಧಿಕಾರಿಯಾಗಿ ಕೆಲಸ ಮಾಡುವ ವೇಳೆಯೇ ತನ್ನಿಬ್ಬರು ಸಹಚರರೊಂದಿಗೆ ಚಂದ್ರುಗೊಂಡಾದಲ್ಲಿ ತಾನೇ ಒಂದು ರಸಗೊಬ್ಬರ ಮತ್ತು ಕೀಟನಾಶಕಗಳ ಅಂಗಡಿಯೊಂದನ್ನು ಆರಂಭಿಸಿದ್ದಾನೆ. ಇದರಿಂದ ಆತನ ವಿರುದ್ಧ ಸೇಡು ಬೆಳೆಸಿಕೊಂಡ ಇತರ ಅಂಗಡಿಗಳ ಮಾಲೀಕರು ಆತನನ್ನು ಎಸಿಬಿಗೆ ಹಿಡಿದುಕೊಟ್ಟಿದ್ದಾರೆ.