ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ರಜೆ ಸೌಲಭ್ಯ ಕುರಿತಂತೆ ಹೊಸ ಆದೇಶವನ್ನು ಡಿಜಿಪಿ ಪ್ರವೀಣ್ ಸೂದ್ ಹೊರಡಿಸಿದ್ದಾರೆ. ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಪಡೆಯುವ ಸಿಬ್ಬಂದಿಗೆ 15 ದಿನಗಳ ಸಾಂದರ್ಭಿಕ ರಜೆ ಬದಲು 10 ದಿನ ಸಾಂದರ್ಭಿಕ ರಜೆ ನೀಡಲಾಗುವುದು.
ಕಾನ್ಸ್ಟೇಬಲ್ ಮತ್ತು ಹೆಡ್ ಕಾನ್ಸ್ಟೇಬಲ್ ವಾರದ ಸಾರ್ವತ್ರಿಕ ರಜೆ ಪಡೆಯಲು ಅರ್ಹರಾಗಿದ್ದು, ಅವರು ರಜೆ ಪಡೆಯಲು ಸಾಧ್ಯವಾಗದಿದ್ದಲ್ಲಿ ವಾರದ ಭತ್ಯೆ ಮಂಜೂರು ಮಾಡಬಹುದು. ಸಾಂದರ್ಭಿಕ ರಜೆಯನ್ನು 15 ದಿನಗಳಿಂದ 10 ದಿನಕ್ಕೆ ಕಡಿತ ಮಾಡಲಾಗಿದೆ.
ಸಾರ್ವತ್ರಿಕ ರಜೆ ಪಡೆಯುವ ಸಿಬ್ಬಂದಿ 10 ದಿನ ಸಾಂದರ್ಭಿಕ ರಜೆ ಮತ್ತು ಎರಡು ದಿನ ನಿರ್ಬಂಧಿತ ರಜೆ ಪಡೆಯಬಹುದಾಗಿದೆ. ಕಾರ್ಯಕಾರಿ ಹುದ್ದೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಹೊರತಾಗಿ ಉಳಿದವರಿಗೆ ಪ್ರತಿ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಸೌಲಭ್ಯ ಕಲ್ಪಿಸಲು ಆದೇಶಿಸಲಾಗಿದೆ. ಮಾಸಿಕ ಕನಿಷ್ಠ 4 ವಾರದ ರಜೆ ನೀಡಲು ಆದೇಶಿಸಲಾಗಿದೆ ಎಂದು ಹೇಳಲಾಗಿದೆ.