ನವದೆಹಲಿ: ವಲಸೆ ಕಾರ್ಮಿಕರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ನಿಯಮಗಳನ್ನು ಸಡಿಲಗೊಳಿಸಿದ್ದು, ಉಜ್ವಲಾ 2.0 ಯೋಜನೆಯಡಿ ಎಲ್.ಪಿ.ಜಿ. ಸಂಪರ್ಕ ಕಲ್ಪಿಸಲಾಗುವುದು.
ವಲಸೆ ಕಾರ್ಮಿಕರು ಇನ್ನೂ ಸರಳವಾಗಿ ಎಲ್ಪಿಜಿ ಸಿಲಿಂಡರ್ ಪಡೆದುಕೊಳ್ಳಬಹುದು. ಉಜ್ವಲ ಯೋಜನೆಯಡಿ ಬಡಕುಟುಂಬಗಳಿಗೆ ಉಚಿತವಾಗಿ ಸಿಲಿಂಡರ್ ವಿತರಿಸಲಿದ್ದು, ವಲಸೆ ಕಾರ್ಮಿಕರನ್ನು ಕೂಡ ಸೇರಿಸಿಕೊಳ್ಳಲಾಗಿದೆ. ಎಲ್ಪಿಜಿ ಸಿಲಿಂಡರ್ ಪಡೆದುಕೊಳ್ಳಲು ವಲಸೆ ಕಾರ್ಮಿಕರು ವಾಸಸ್ಥಳದ ದಾಖಲೆಗಳನ್ನು ಸಲ್ಲಿಸಬೇಕಿಲ್ಲ ಎನ್ನಲಾಗಿದೆ.
ಉಜ್ವಲ 2.0 ಯೋಜನೆಯಡಿ ಎಲ್ಪಿಜಿ ಸಿಲಿಂಡರ್ ಠೇವಣೆ ಇಲ್ಲದೆಯೂ ಪಡೆಯಬಹುದಾಗಿದೆ. ಇದರೊಂದಿಗೆ ಒಂದು ಸ್ಟವ್ ಉಚಿತವಾಗಿ ನೀಡಲಾಗುತ್ತದೆ. ವಲಸೆ ಕಾರ್ಮಿಕರು ವಾಸಸ್ಥಳದ ದಾಖಲೆ ಸಲ್ಲಿಸಬೇಕಿಲ್ಲ. ದೃಢೀಕರಣ ಹೇಳಿಕೆ ನೀಡಿದರೆ ಸಾಕು ಎಂದು ಹೇಳಲಾಗಿದೆ.