ಟೆಕ್ನಾಲಜಿ ನಮ್ಮ ಜೀವನದ ಒಂದು ಭಾಗವಾಗಿದೆ. ಪ್ರತಿ ದಿನ ಇದರೊಂದಿಗೆ ಜೀವನ ನಡೆಸುತ್ತಿದ್ದರು ನಮಗೆ ಅದ್ರ ಬಗ್ಗೆ ಸರಿಯಾಗಿ ತಿಳಿದಿರುವುದಿಲ್ಲ. ಉದಾಹರಣೆಗೆ ಮೊಬೈಲ್ ಫೋನ್ ಉಪಯೋಗಿಸುತ್ತೇವೆ. ಅದರಲ್ಲಿ ಬಳಸುವ ಸಿಮ್ ಕಾರ್ಡ್ ಫುಲ್ ಫಾರ್ಮ್ ನಮಗೆ ಗೊತ್ತಿರುವುದಿಲ್ಲ. ಪಾನ್ ಕಾರ್ಡ್ ಬಗ್ಗೆಯೂ ಅನೇಕರಿಗೆ ತಿಳಿದಿಲ್ಲ. ಇವೆಲ್ಲದರ ಬಗ್ಗೆ ಸಣ್ಣ ಮಾಹಿತಿ ಇಲ್ಲಿದೆ.
ಸಿಮ್ ಕಾರ್ಡ್ ಫುಲ್ ಫಾರ್ಮ್ : ಸಿಮ್ ಕಾರ್ಡನ್ನು ಕನ್ನಡದಲ್ಲಿ ಚಂದಾದಾರರ ಗುರುತಿನ ಚೀಟಿ (subscriber identity module) ಅಂತ ಹೇಳುತ್ತಾರೆ.
ಪಿಡಿಎಫ್ : ಆನ್ಲೈನ್ ದಾಖಲೆಗಳು ಹೆಚ್ಚಾಗಿ ಪಿಡಿಎಫ್ ರೂಪದಲ್ಲಿರುತ್ತವೆ. ಪಿಡಿಎಫ್ ಫೈಲ್ ಅನ್ನು ಅಧಿಕೃತ ಕೆಲಸದಲ್ಲಿ ಬಳಸಲಾಗುತ್ತದೆ. ಇದರ ಪೂರ್ಣ ರೂಪ ಪೋರ್ಟಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್ ಆಗಿದೆ.
ಪಾನ್ ಕಾರ್ಡ್ : ಪಾನ್ ಕಾರ್ಡನ್ನು ಭಾರತದಲ್ಲಿ ಗುರುತಿನ ದಾಖಲೆಯಾಗಿ ಬಳಸಲಾಗುತ್ತದೆ. (Permanent Account Number) ಇದರ ಪೂರ್ಣ ಹೆಸರು ಶಾಶ್ವತ ಖಾತೆ ಸಂಖ್ಯೆ.
ಐ ಎಫ್ ಎಸ್ಸಿ : ಇದನ್ನು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಬಳಸಲಾಗುತ್ತದೆ. ಹಣವನ್ನು ವರ್ಗಾಯಿಸಿದಾಗಲೆಲ್ಲಾ ಐ ಎಫ್ ಎಸ್ಸಿ ಕೋಡ್ ಅಗತ್ಯವಿದೆ. ವಿವಿಧ ಬ್ಯಾಂಕ್ ಶಾಖೆಗಳು ವಿಭಿನ್ನ ಐ ಎಫ್ ಎಸ್ಸಿ ಹೊಂದಿವೆ. ಭಾರತೀಯ ಹಣಕಾಸು ವ್ಯವಸ್ಥೆ ಕೋಡ್ ಎಂದು ಇದನ್ನು ಕರೆಯಲಾಗುತ್ತದೆ.