ಗ್ರಾಹಕರು ಆರ್ಡರ್ ಮಾಡಿದ್ದ ಆಹಾರವನ್ನು ಕದ್ದು ತಿನ್ನುತ್ತಿದ್ದ ಊಬರ್ ಈಟ್ಸ್ ಚಾಲಕನ ಕಳ್ಳಾಟ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಹಿನ್ನೆಲೆ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಊಬರ್ ಚಾಲಕ ತನ್ನ ಬರಿ ಕೈಗಳಿಂದಲೇ ನ್ಯೂಡಲ್ಸ್ ನ್ನು ಪ್ಲಾಸ್ಟಿಕ್ ಬಾಕ್ಸಿನೊಳಕ್ಕೆ ಹಾಕಿದ್ದಾನೆ. ಬಳಿಕ ಇನ್ನೊಂದು ಬಾಕ್ಸಿನಿಂದ ಚಿಕನ್ ತೆಗೆದುಕೊಂಡು ನ್ಯೂಡಲ್ಸ್ ಮೇಲೆ ಇಟ್ಟುಕೊಂಡಿದ್ದಾನೆ.
ಎಲ್ಲವನ್ನು ತಿಂದು ಕೈ ಬೆರಳುಗಳನ್ನೂ ನೆಕ್ಕಿದ ಚಾಲಕ ಆರ್ಡರ್ ಮಾಡಬೇಕಾಗಿದ್ದ ಪಾರ್ಸೆಲ್ಗಳನ್ನು ಸರಿಯಾಗಿ ಜೋಡಿಸಿಕೊಂಡಿದ್ದಾನೆ.
ಟಿಕ್ಟಾಕ್ನಲ್ಲಿ ಮೊದಲು ವೈರಲ್ ಆದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದ ಎಲ್ಲಾ ವೇದಿಕೆಗಳಲ್ಲು ಹರಿದಾಡುತ್ತಿದೆ. ಈ ಸಂಬಂಧ ಊಬರ್ಗೆ ದೂರನ್ನು ನೀಡಲಾಗಿದ್ದು ಈತನನ್ನು ಕೆಲಸದಿಂದ ತೆಗೆದುಹಾಕಿರೋದಾಗಿ ಊಬರ್ ವಕ್ತಾರ ಮಾಹಿತಿ ನೀಡಿದ್ದಾರೆ.