ಕೊರೊನಾ ನಂತ್ರ ಪ್ರತಿಯೊಬ್ಬರ ಜೀವನದಲ್ಲಿ ಬದಲಾವಣೆಯಾಗಿದೆ. ವಿಶೇಷವಾಗಿ ಮಹಿಳೆಯರ ಜೀವನದಲ್ಲಿ ಅನೇಕ ಬದಲಾವಣೆಗಳಾಗಿವೆ. ಸಾಂಕ್ರಾಮಿಕ ರೋಗದ ಮಧ್ಯೆ, ಭಾರತೀಯ ಮಹಿಳೆಯರಿಗೆ ಹೆಚ್ಚು ಕಷ್ಟವಾಗಿದೆ. ವೈಯಕ್ತಿಕ ಜೀವನದ ಜೊತೆ ಅವರ ವೃತ್ತಿ ಜೀವನದಲ್ಲಿ ದೊಡ್ಡ ಬದಲಾವಣೆಯಾಗಿದೆ.
ಒಂದು ವರದಿಯ ಪ್ರಕಾರ, ಈಗ ಮಹಿಳೆಯರ ಜೀವನ ಶೈಲಿಯಲ್ಲಿ ಮತ್ತು ಪ್ರೀತಿ ಮತ್ತು ಮದುವೆಯ ಆಲೋಚನೆಗಳಲ್ಲಿ ಬದಲಾವಣೆ ನೋಡಬಹುದಾಗಿದೆ. ಹುಡುಗಿಯರಲ್ಲಿ ಡೇಟಿಂಗ್ ಆಪ್‌ಗಳ ಬಳಕೆ ಹೆಚ್ಚಾಗಿದೆ. ಅವರು ನಿಜವಾದ ಪ್ರೀತಿ ಹುಡುಕುತ್ತಿದ್ದಾರೆ.
ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ವಾಟ್ಸಾಪ್, ಟಿಂಡರ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಜನರು ನಡೆಸುವ ಸಂಭಾಷಣೆಗಳನ್ನು ಬಬಲ್ ಸಮೀಕ್ಷೆ ನಡೆಸಿದೆ. ಸಮೀಕ್ಷೆಯು ಮಹಿಳೆಯರನ್ನು ಆಧರಿಸಿತ್ತು. ಟಿಂಡರ್, ಬಂಬಲ್, ಹಿಂಜ್, ಹ್ಯಾಪ್ನ್, ಓಕೆ ಕ್ಯುಪಿಡ್ ನಂತಹ ಡೇಟಿಂಗ್ ಆಪ್ ಗಳ ಬಳಕೆ ಹೆಚ್ಚುತ್ತಿರುವ ನಡುವೆ, ಶೇಕಡಾ 72ರಷ್ಟು ಮಹಿಳೆಯರು ಡೇಟಿಂಗ್ ಮತ್ತು ನಿಜವಾದ ಪ್ರೀತಿಯನ್ನು ಪಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದು ತಿಳಿದುಬಂದಿದೆ.
ಹೆಚ್ಚುತ್ತಿರುವ ನಗರೀಕರಣ, ಪಾಶ್ಚಿಮಾತ್ಯ ನಾಗರೀಕತೆಗೆ ಹೆಚ್ಚು ಒಡ್ಡಿಕೊಳ್ಳುವುದರಿಂದ, ಭಾರತೀಯ ಹುಡುಗಿಯರ ಜೀವನ ಶೈಲಿಯಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ಇದರ ಫಲಿತಾಂಶವೆಂದರೆ ವೃತ್ತಿಜೀವನದ ಬಗ್ಗೆ ಸ್ವತಂತ್ರಳಾಗುವುದು ಮಾತ್ರವಲ್ಲ, ಜೀವನ, ಪ್ರೀತಿ ಮತ್ತು ಮದುವೆಯ ಮಹತ್ವದ ನಿರ್ಧಾರಗಳ ಬಗ್ಗೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುತ್ತಿದ್ದಾಳೆ.
ಇದಲ್ಲದೆ ಸಮೀಕ್ಷೆಯು, ಜನವರಿಯಿಂದ ಫೆಬ್ರವರಿವರೆಗಿನ ಎರಡು ತಿಂಗಳಲ್ಲಿ ಸರಾಸರಿ, ಒಂದು ಮಹಿಳೆ ಕ್ಷಮಿಸಿ ಎಂಬ ಪದವನ್ನು 18 ಕ್ಕೂ ಹೆಚ್ಚು ಬಾರಿ ಬಳಸಿದ್ದಾಳೆ ಎಂಬುದು ಬಹಿರಂಗವಾಗಿದೆ. ಒಬ್ಬ ಮಹಿಳೆ ಪ್ರೀತಿ ಎಂದು ಪದವನ್ನು ಸರಾಸರಿ 16 ಬಾರಿ ಮತ್ತು ನಾನು ಪದವನ್ನು 15 ಬಾರಿ ಹೇಳಿದ್ದಾಳಂತೆ.