ಅಮೆರಿಕಾದಲ್ಲಿ ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರ ಅಬ್ಬರಿಸುತ್ತಿದೆ. ದಿನೇ ದಿನೇ ಸೋಂಕಿನ ಪ್ರಕರಣಗಳಲ್ಲಿ ಹೆಚ್ಚಳ ಕಂಡು ಬರ್ತಿದೆ. ಈ ಬಾರಿ ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ತಿದೆ. ಕೋವಿಡ್ -19 ಸೋಂಕಿಗೆ ಒಳಗಾದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ದಾಖಲಾಗ್ತಿದ್ದಾರೆ. ತಜ್ಞರ ಪ್ರಕಾರ, ದೊಡ್ಡವರಿಗಿಂತ ಮಕ್ಕಳಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚಿದೆ.
ಕಡಿಮೆ ಲಸಿಕೆ ಪಡೆದಿರುವ ಕ್ಷೇತ್ರಗಳಲ್ಲಿ ಸೋಂಕಿನ ಸಂಖ್ಯೆ ಹೆಚ್ಚಾಗಿದೆ. ಈ ಕ್ಷೇತ್ರಗಳಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ದಾಖಲಾಗ್ತಿದ್ದಾರೆ. ಜುಲೈ ಆರಂಭದಿಂದಲೂ ಪ್ರಕರಣಗಳ ಸಂಖ್ಯೆಯಲ್ಲಿ ಸ್ಥಿರವಾದ ಹೆಚ್ಚಳವನ್ನು ಕಂಡಿದ್ದೇವೆ. ಆಸ್ಪತ್ರೆಗೆ ದಾಖಲಾದ ಮಕ್ಕಳ ಸಂಖ್ಯೆ ಹೆಚ್ಚಾಗ್ತಿದೆ ಎಂದು ಟೆಕ್ಸಾಸ್ ಮಕ್ಕಳ ಆಸ್ಪತ್ರೆಯ ಮಕ್ಕಳ ವೈದ್ಯ ಡಾ. ಜೇಮ್ಸ್ ವರ್ಸಲೋವಿಕ್ ಹೇಳಿದ್ದಾರೆ.
ಡಾ. ಜೇಮ್ಸ್ ವರ್ಸಲೋವಿಕ್ ಪ್ರಕಾರ, ಇದು ಕೊರೊನಾದ ನಾಲ್ಕನೇ ಅಲೆಯೆಂದು ಪರಿಗಣಿಸಲಾಗಿದೆ. ಇದಕ್ಕೆ ಕಾರಣ ಡೆಲ್ಟಾ ರೂಪಾಂತರ ಕಾರಣ. ಡೆಲ್ಟಾ ರೂಪಾಂತರ, ಕೊರೊನಾದ ಸದ್ಯದ ಎಲ್ಲ ರೂಪಾಂತರಗಳಲ್ಲಿ ಅತ್ಯಂತ ಸಾಂಕ್ರಾಮಿಕವಾಗಿದೆ. ಡೆಲ್ಟಾ ರೂಪಾಂತರವು ಶೇಕಡಾ 90ರಷ್ಟು ಮಕ್ಕಳನ್ನು ಕೊರೊನಾ ಸೋಂಕಿಗೆ ನೂಕಿದೆ.
12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಲಸಿಕೆ ಲಭ್ಯವಾಗಿಲ್ಲ. 12 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನ ನಡೆಯುತ್ತಿದೆ. ಆದ್ರೆ ಈಗ್ಲೂ ಅನೇಕರು ಲಸಿಕೆ ಹಾಕಿಸಿಕೊಂಡಿಲ್ಲವೆಂದು ಅವರು ಹೇಳಿದ್ದಾರೆ.