alex Certify ‘ಬಡವರಿಗೆ’ ಮೋದಿ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ‘ಉಚಿತ ಗ್ಯಾಸ್’ ಸಂಪರ್ಕದ ‘ಉಜ್ವಲ’ ಯೋಜನೆ 2.0 ಜಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬಡವರಿಗೆ’ ಮೋದಿ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ‘ಉಚಿತ ಗ್ಯಾಸ್’ ಸಂಪರ್ಕದ ‘ಉಜ್ವಲ’ ಯೋಜನೆ 2.0 ಜಾರಿ

ಉಜ್ವಲ 2.0(ಪ್ರಧಾನ ಮಂತ್ರಿ ಉಜ್ವಲ ಯೋಜನೆ – PMUY)ಯನ್ನು LPG ಸಂಪರ್ಕಗಳನ್ನು ಹಸ್ತಾಂತರಿಸುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಮಧ್ಯಾಹ್ನ 12:30 ಕ್ಕೆ ಉತ್ತರ ಪ್ರದೇಶದ ಮಹೋಬಾದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ನಲ್ಲಿ ಪ್ರಾರಂಭಿಸಲಿದ್ದಾರೆ.

ಇದೇ ವೇಳೆ ಉಜ್ವಲ ಫಲಾನುಭವಿಗಳೊಂದಿಗೆ ಪ್ರಧಾನಿ ಸಂವಾದ ನಡೆಸಲಿದ್ದು, ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿಯಿಂದ ಅಧಿಕೃತ ಪ್ರಕಟಣೆ ತಿಳಿಸಿದೆ.

2016 ರಲ್ಲಿ ಆರಂಭವಾದ ಉಜ್ವಲ 1.0 ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಕುಟುಂಬಗಳ 5 ಕೋಟಿ ಮಹಿಳಾ ಸದಸ್ಯರಿಗೆ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್(ಎಲ್‌ಪಿಜಿ) ಸಂಪರ್ಕಗಳನ್ನು ಒದಗಿಸುವ ಗುರಿಯನ್ನು ಹೊಂದಲಾಗಿತ್ತು.

ತರುವಾಯ, ಈ ಯೋಜನೆಯನ್ನು 2018 ರ ಏಪ್ರಿಲ್‌ನಲ್ಲಿ ವಿಸ್ತರಿಸಲಾಯಿತು. ಇನ್ನೂ ಏಳು ವರ್ಗಗಳ (SC / ST, PMAY, AAY, ಅತ್ಯಂತ ಹಿಂದುಳಿದ ವರ್ಗಗಳು, ಚಹಾ ತೋಟ, ಅರಣ್ಯ ನಿವಾಸಿಗಳು, ದ್ವೀಪಗಳು) ಮಹಿಳಾ ಫಲಾನುಭವಿಗಳನ್ನು ಸೇರಿಸಲಾಯಿತು.

ಅಲ್ಲದೆ, ಗುರಿಯನ್ನು 8 ಕೋಟಿ LPG ಸಂಪರ್ಕಗಳಿಗೆ ಪರಿಷ್ಕರಿಸಲಾಗಿದೆ. ಈ ಗುರಿಯನ್ನು ಆಗಸ್ಟ್ 2019 ರಲ್ಲಿ ಸಾಧಿಸಲಾಗಿದೆ. ನಿಗದಿತ ದಿನಾಂಕಕ್ಕಿಂತ 7 ತಿಂಗಳು ಮುಂಚಿತವಾಗಿ ಗುರಿ ತಲುಪಲಾಗಿದೆ.

2021-22ರ ಆರ್ಥಿಕ ವರ್ಷದ ಕೇಂದ್ರ ಬಜೆಟ್ ನಲ್ಲಿ, ಪಿಎಂಯುವೈ ಯೋಜನೆಯಡಿ ಹೆಚ್ಚುವರಿ ಒಂದು ಕೋಟಿ ಎಲ್ಪಿಜಿ ಸಂಪರ್ಕದ ಅವಕಾಶವನ್ನು ಘೋಷಿಸಲಾಗಿದೆ. ಈ ಒಂದು ಕೋಟಿ ಹೆಚ್ಚುವರಿ PMUY ಸಂಪರ್ಕಗಳು (ಉಜ್ವಲ 2.0 ಅಡಿಯಲ್ಲಿ) PMUY ಯ ಹಿಂದಿನ ಹಂತಕ್ಕೆ ಒಳಪಡದ ಕಡಿಮೆ ಆದಾಯದ ಕುಟುಂಬಗಳಿಗೆ ಠೇವಣಿ ರಹಿತ LPG ಸಂಪರ್ಕಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಉಜ್ವಲ 2.0 ಯೋಜನೆಯಡಿ ಠೇವಣಿ ರಹಿತ ಎಲ್‌ಪಿಜಿ ಸಂಪರ್ಕದೊಂದಿಗೆಸಿಲಿಂಡರ್, ಸ್ಟವ್ ಫಲಾನುಭವಿಗಳಿಗೆ ಉಚಿತವಾಗಿ ಒದಗಿಸಲಾಗುವುದು. ಉಜ್ವಲ 2.0 ರಲ್ಲಿ ವಲಸಿಗರು ಪಡಿತರ ಚೀಟಿ ಅಥವಾ ವಿಳಾಸ ಪುರಾವೆ ಸಲ್ಲಿಸುವ ಅಗತ್ಯವಿಲ್ಲ. ‘ಕುಟುಂಬ ಘೋಷಣೆ’ ಮತ್ತು ‘ವಿಳಾಸದ ಪುರಾವೆ’ ಎರಡಕ್ಕೂ ಸ್ವಯಂ ಘೋಷಣೆ ಸಾಕು ಎಂದು ಹೇಳಲಾಗಿದೆ.

ಮೋದಿ ಯೋಜನೆಗೆ ಚಾಲನೆ ನೀಡುವ ಸಂದರ್ಭದಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಎಸ್. ಪುರಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಭಾಗವಹಿಸಲಿದ್ದಾರೆ.

ಪಿಎಂ-ಕಿಸಾನ್ ಯೋಜನೆಯಡಿ ಸುಮಾರು ರೂ. 19,500 ಕೋಟಿಗಳನ್ನು 9.75 ಕೋಟಿಗೂ ಹೆಚ್ಚು ಫಲಾನುಭವಿ ರೈತರಿಗೆ ಸೋಮವಾರ ಮೋದಿ ವರ್ಗಾಯಿಸಿದ್ದು, ಮರುದಿನ ಉಜ್ವಲ 2.0 ಯೋಜನೆಗೆ ಚಾಲನೆ ನೀಡಲಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...