ಜಾವೆಲಿನ್ ಎಸೆತದಲ್ಲಿ ಒಲಿಂಪಿಕ್ ಚಿನ್ನದ ಪದಕ ಗೆಲ್ಲುವ ಮೂಲಕ ದೇಶದಲ್ಲಿ ಸಂಚಲನ ಸೃಷ್ಟಿಸಿರುವ ನೀರಜ್ ಚೋಪ್ರಾ ಈಗ ಮನೆಮಾತಾಗಿದ್ದಾರೆ. ಆನ್ಲೈನ್ನಲ್ಲಿ ಎಲ್ಲೆಲ್ಲೂ ನೀರಜ್ರದ್ದೇ ಜಪ ಎನ್ನುವಂತಾಗಿದೆ.
ನೀರಜ್ ಹೆಸರು ಇತಿಹಾಸದ ಪುಸ್ತಕಗಳಲ್ಲಿ ದಾಖಲಾಗಿದೆ. ಆದರೂ ಸಹ ಈ ಆಟದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಆಟಗಾರ ನೀರಜ್ ಅಲ್ಲ ಎಂದಿರುವ ಗಬ್ಬರ್ ಹೆಸರಿನ ಟ್ವಿಟ್ಟಿಗರೊಬ್ಬರು, ’ಆ ಆಟಗಾರ’ ಜಾವೆಲಿನ್ ಎಸೆತದಲ್ಲಿ ಭಾಗಿಯಾಗಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಬಿಜೆಪಿ ಶಾಸಕ ಪ್ರೀತಂ ಗೌಡಗೆ ಸಚಿವ ಸೋಮಣ್ಣ ಟಾಂಗ್
ಯಾರಪ್ಪಾ ಇದು ಎಂದು ಇನ್ನೂ ಅಚ್ಚರಿಯಾಗುತ್ತಿದೆಯೇ ? ತೆಲುಗು ಚಿತ್ರನಟ ಚಿರಂಜೀವಿ ಅವರು ಚಿತ್ರವೊಂದರಲ್ಲಿ ನಟಿಸಿರುವ ದೃಶ್ಯವೊಂದನ್ನು ಇಲ್ಲಿ ಶೇರ್ ಮಾಡಲಾಗಿದೆ. ಈ ಸೀನ್ನಲ್ಲಿ ಅಥ್ಲೀಟ್ ಆಗಿರುವ ಚಿರಂಜೀವಿರ ಜಾವೆಲಿನ್ ಕೌಶಲ್ಯ ಯಾವ ಮಟ್ಟಿಗೆ ಇದೆ ಎಂದರೆ, ಅವರು ಎಸೆದ ಜಾವೆಲಿನ್ ಜಡ್ಜ್ಗಳ ಮೇಜಿಗೇ ಹೋಗಿ ಬಿದ್ದು, ಅವರು ಚಿರಂಜೀವಿಯೇ ವಿನ್ನರ್ ಎಂದು ಘೋಷಿಸುವ ಮಟ್ಟಿಗೆ !
https://twitter.com/GabbbarSingh/status/1424299290696970243?ref_src=twsrc%5Etfw%7Ctwcamp%5Etweetembed%7Ctwterm%5E1424299290696970243%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fnot-neeraj-chopra-viral-hilarious-clip-shows-the-first-guy-who-won-the-gold-medal-for-javelin-viral-video%2F796743