ತನ್ನ ಬಳಕೆದಾರರಿಗೆ ವೈಯಕ್ತಿಕ ಮಾಹಿತಿಯನ್ನು ನಿಯಂತ್ರಿಸಲು ಇನ್ನಷ್ಟು ಆಯ್ಕೆಗಳನ್ನು ಕೊಡಲು ಮುಂದಾಗಿರುವ ಫೇಸ್ಬುಕ್, ಸೋಮವಾರ ಈ ಸಂಬಂಧ ಕೆಲವೊಂದು ಅಪ್ಡೇಟ್ಗಳನ್ನು ಘೋಷಿಸಿದೆ.
ಡೇಟಾ ಪೋರ್ಟಬಿಲಿಟಿ ಟೂಲ್ ಅನ್ನು ಮತ್ತೊಮ್ಮೆ ಅಭಿವೃದ್ಧಿಪಡಿಸಿರುವುದಾಗಿ ತಿಳಿಸಿರುವ ಸಾಮಾಜಿಕ ಜಾಲತಾಣ ದಿಗ್ಗಜ, ಈ ಮೂಲಕ ಜನರು ಫೇಸ್ಬುಕ್ನಲ್ಲಿರುವ ತಮ್ಮ ಮಾಹಿತಿಯನ್ನು ’ಟ್ರಾನ್ಸ್ಫರ್ ಯುವರ್ ಇನ್ಫಾರ್ಮೇಷನ್’ ಫೀಚರ್ ಮೂಲಕ ವರ್ಗಾಯಿಸಿಕೊಳ್ಳಬಹುದಾಗಿದೆ ಎಂದಿದೆ.
ಈ ಅಪ್ಡೇಟ್ ಗಳ ಪೈಕಿ ಬಳಕೆದಾರರ ಅನುಭವದಲ್ಲಿ ಸುಧಾರಣೆಗಳು, ಎರಡು ಹೊಸ ಡೆಸ್ಟಿನೇಷನ್ಗಳ ಸೇರ್ಪಡೆ (ಫೋಟೋಬಕೆಟ್ ಮತ್ತು ಗೂಗಲ್ ಕ್ಯಾಲೆಂಡರ್) ಹಾಗೂ ಫೇಸ್ಬುಕ್ ಇವೆಂಟ್ ಎಂಬ ಹೊಸ ಡೇಟಾ ಮಾದರಿ ಸೇರಿಕೊಂಡಿವೆ.
BREAKING NEWS: CRPF ಬೆಟಾಲಿಯನ್ ಮೇಲೆ ಉಗ್ರರ ದಾಳಿ
ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಲಾದ ಕಂಟೆಂಟ್ಗಳನ್ನು ಗೂಗಲ್ ಡಾಕ್ಯುಮೆಂಟ್ಸ್, ಬ್ಲಾಗರ್ ಹಾಗೂ ವರ್ಡ್ಪ್ರೆಸ್.ಕಾಮ್ಗಳಿಗೆ ವರ್ಗಾವಣೆ ಮಾಡಿಕೊಳ್ಳಬಹುದಾದ ಎರಡು ಹೊಸ ಡೇಟಾ ಪೋರ್ಟಬಿಲಿಟಿ ಟೈಪ್ಗಳನ್ನು ಕಳೆದ ಏಪ್ರಿಲ್ನಲ್ಲಿ ಫೇಸ್ಬುಕ್ ಪರಿಚಯಿಸಿತ್ತು.
ಬ್ಯಾಕ್ಬ್ಲೇಜ್, ಡ್ರಾಪ್ಬಾಕ್ಸ್, ಗೂಗಲ್ ಫೋಟೋಸ್ ಮತ್ತು ಕೂಫ್ರ್ಗಳಿಗೆ ಫೋಟೋ/ವಿಡಿಯೋಗಳನ್ನು ವರ್ಗಾವಣೆ ಮಾಡುವ ಆಯ್ಕೆಯನ್ನು ಫೇಸ್ಬುಕ್ ತನ್ನ ಬಳಕೆದಾರರಿಗೆ ಕಳೆದ ವರ್ಷ ಕೊಟ್ಟಿತ್ತು.