ಆಚೆ ಹೋಗಿ ತಿನ್ನಬೇಕು ಎನಿಸಿದಾಗ ಎಲ್ಲಿ ಹೋಗೋದು ಎಂದು ಆಯ್ಕೆ ಮಾಡುವುದು ಒಮ್ಮೊಮ್ಮೆ ಕಷ್ಟದ ಕೆಲಸವಾಗಿಬಿಡುತ್ತದೆ. ಕೆಲವರಿಗೆ ಈ ವಿಚಾರವಾಗಿ ಆಯ್ಕೆ ಮಾಡಲು ಗಂಟೆಗಳು ಬೇಕಾಗಬಹುದು.
21 ವರ್ಷದ ಕ್ರಿಸ್ಟೀನ್ ಸನ್ ಹೀಗೆ ರೆಸ್ಟೋರೆಂಟ್ ಆಯ್ಕೆ ಮಾಡುವ ವಿಚಾರದಲ್ಲಿ ಭಾರೀ ಗೊಂದಲಕ್ಕೊಳಗಾಗುವ ವ್ಯಕ್ತಿಗಳಲ್ಲಿ ಒಬ್ಬರು. ಕಾನೂನು ವಿದ್ಯಾರ್ಥಿನಿಯಾದ ಕ್ರಿಸ್ಟೀನ್ ತನ್ನ ಬಾಯ್‌ಫ್ರೆಂಡ್ ಆಗಿರುವ ಸಾಫ್ಟ್‌ವೇರ್ ಇಂಜಿನಿಯ್ ಆಗಮ್ ಬಡೆಚಾ ಜೊತಗೆ ಏನಾದರೂ ತಿನ್ನಲು ಆನ್ಲೈನ್‌ನಲ್ಲಿ ಆರ್ಡರ್ ಮಾಡಲು ಗಂಟೆಗಟ್ಟಲೇ ಸಮಯ ತೆಗೆದುಕೊಳ್ಳುತ್ತಾರೆ.
ತನ್ನ ಗರ್ಲ್‌ಫ್ರೆಂಡ್‌ನ ಈ ಸಮಸ್ಯೆಗೆ ಪರಿಹಾರವೊಂದನ್ನು ಕಂಡುಕೊಂಡಿರುವ ಬಡೆಚಾ, ತನ್ನ ಕೋಡಿಂಗ್ ಕೌಶಲ್ಯವನ್ನು ಬಳಸಿಕೊಂಡು 10 ಸೆಕೆಂಡ್‌ಗಳಲ್ಲಿ ತನ್ನ ಮೆಚ್ಚಿನ ರೆಸ್ಟೋರೆಂಟ್ ಆಯ್ಕೆ ಮಾಡಿಕೊಳ್ಳಬಹುದಾದ ಪ್ರೋಗ್ರಾಂ ಒಂದನ್ನು ಅಭಿವೃದ್ಧಿಪಡಿಸಿದ್ದಾರೆ.
BIG NEWS: ವಿದ್ಯುತ್ ಇಲಾಖೆ ಖಾಸಗೀಕರಣ ವಿರೋಧಿಸಿ ಕೈಗೊಂಡಿದ್ದ ಮುಷ್ಕರ ಮುಂದೂಡಿಕೆ
ತಮ್ಮ ಪ್ರೇಮಸಲ್ಲಾಪದ ವಾರ್ಷಿಕೋತ್ಸವದ ಪ್ರಯುಕ್ತ ಬಡೆಚಾ ತನ್ನ ಈ ಆವಿಷ್ಕಾರವನ್ನು ಗರ್ಲ್‌ಫ್ರೆಂಡ್‌ನ ಮ್ಯಾಕ್‌ಗೆ ಏರ್‌ಡ್ರಾಪ್ ಮಾಡಿದ್ದಾರೆ.
ಯೆಲ್ಪ್‌ನ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್‌ಫೇಸ್ ಮೂಲಕ ಯಾವುದೇ ಕೆಟಗರಿಯ — ಮೆಕ್ಸಿಕನ್ ಫುಡ್‌ನಿಂದ ಕಾಂಟಿನೆಂಟಲ್‌ವರೆಗೂ — ಟಾಪ್ 50 ರೆಸ್ಟೋರಂಟ್‌ಗಳನ್ನು ಪತ್ತೆ ಮಾಡಲು ಅನುವಾಗುವ ಪ್ರೋಗ್ರಾಂ ಅನ್ನು ಅಭಿವೃದ್ಧಿಪಡಿಸಲಾಗಿದೆ.