alex Certify GOOD NEWS: ವಾರದಲ್ಲಿ ಬರಲಿದೆ ʼಜ಼ೈಡಸ್‌ʼನ ಕೋವಿಡ್ ಲಸಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS: ವಾರದಲ್ಲಿ ಬರಲಿದೆ ʼಜ಼ೈಡಸ್‌ʼನ ಕೋವಿಡ್ ಲಸಿಕೆ

ಜ಼ೈಡಸ್‌ನ ಕ್ಯಾಡಿಲ್ಲಾ ಸೂಜಿ-ರಹಿತ ಕೋವಿಡ್ ಲಸಿಕೆಗೆ ತುರ್ತು ಬಳಕೆ ಅನುಮತಿ (ಇಯುಎ) ಕೊಡಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.  ಈ ಮೂಲಕ ಜ಼ೈಡಸ್‌ನ ಜ಼ೈಕೋವ್‌-ಡಿ ಲಸಿಕೆಯು ಭಾರತದಲ್ಲಿ ಕೋವಿಡ್‌ ವಿರುದ್ಧ ಬಳಸಲು ಲಭ್ಯವಿರುವ ಆರನೇ ಲಸಿಕೆಯಾಗಲಿದೆ.

ಅದಾಗಲೇ ಕೋವಿಶೀಲ್ಡ್‌, ಕೋವ್ಯಾಕ್ಸಿನ್, ಸ್ಪುಟ್ನಿಕ್-V, ಮೊಡೆರ್ನಾ ಮತ್ತು ಜಾನ್ಸನ್‌ & ಜಾನ್ಸನ್‌‌ನ ಸಿಂಗಲ್ ಡೋಸ್ ಲಸಿಕೆಗಳ ಬಳಕೆಗೆ ಸರ್ಕಾರದ ಅನುಮತಿ ಇದೆ.

BIG BREAKING: SSLC ಪರೀಕ್ಷಾ ಫಲಿತಾಂಶ ಪ್ರಕಟ

ಜ಼ೈಕೋವ್‌-ಡಿ ಮೂರು ಡೋಸ್‌ಗಳ ಲಸಿಕೆಯಾಗಿದ್ದು, ವರ್ಷವೊಂದಕ್ಕೆ 10-12 ಕೋಟಿ ಲಸಿಕೆಗಳ ಉತ್ಪಾದನೆಗೆ ಕಂಪನಿ ಯೋಜನೆ ಹಾಕಿಕೊಂಡಿದೆ. ದೇಶಾದ್ಯಂತ 50ಕ್ಕೂ ಹೆಚ್ಚು ಪ್ರಯೋಗ ಕೇಂದ್ರಗಳಲ್ಲಿ ತನ್ನ ಲಸಿಕೆಯ ಪ್ರಯೋಗ ಮಾಡಲಾಗಿದೆ ಎಂದು ಜ಼ೈಡಸ್ ತಿಳಿಸಿದೆ.

ಕೋವಿಡ್ ಲಸಿಕೆ ಕಾರ್ಯಕ್ರಮಕ್ಕೆ ಚುರುಕು ನೀಡಲು ದೇಶದ ನಾಲ್ಕು ಫಾರ್ಮಾ ಕಂಪನಿಗಳು ನವೆಂಬರ್‌-ಡಿಸೆಂಬರ್‌ನಿಂದ ಲಸಿಕೆ ಉತ್ಪಾದನೆ ಶುರು ಮಾಡಬಹುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸಂಸತ್ತಿನಲ್ಲಿ ಕಳೆದ ವಾರ ತಿಳಿಸಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...