ಬೆಂಗಳೂರು: ಕಳೆದ ಜುಲೈನಲ್ಲಿ ನಡೆದಿದ್ದ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗಿದೆ. ಆದರೆ, ವೆಬ್ಸೈಟ್ ಓಪನ್ ಆಗದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್ ಅವರು ವೆಬ್ಸೈಟ್ ನಲ್ಲಿ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಆದರೆ, ಫಲಿತಾಂಶ ವೀಕ್ಷಿಸಲು ನೀಡಲಾದ ವೆಬ್ಸೈಟ್ ಗಳು ಓಪನ್ ಆಗದೆ ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸಲು ಪರದಾಡುವಂತಾಗಿದೆ.
ವಿದ್ಯಾರ್ಥಿಗಳು, ಪೋಷಕರು ಫಲಿತಾಂಶ ವೀಕ್ಷಿಸಲು sslc.karnataka.gov.in ಹಾಗೂ www.karresults.nic.in ವೆಬ್ಸೈಟ್ ಗಳನ್ನು ಓಪನ್ ಮಾಡಿದರೆ ಎರರ್ ಬರುತ್ತಿದೆ. ಜಾಲತಾಣಕ್ಕೆ ಸಂಪರ್ಕವೇ ಸಾಧ್ಯವಾಗ್ತಿಲ್ಲ ಎಂದು ಹೇಳಲಾಗಿದೆ.