ರಾಮನಗರ: ಸಿನಿಮಾ ಚಿತ್ರೀಕರಣ ವೇಳೆ ಫೈಟರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಡದಿ ಪೊಲೀಸರು ನಿರ್ದೇಶಕ, ನಿರ್ಮಾಪಕ ಹಾಗೂ ಫೈಟ್ ಮಾಸ್ಟರ್ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ನಟ ಅಜಯ್ ರಾವ್ ಹಾಗೂ ರಚಿತಾ ರಾಮ್ ಅಭಿನಯದ ಲವ್ ಯೂ ರಚ್ಚು ಚಿತ್ರದ ಶೂಟಿಂಗ್ ವೇಳೆ ಹೈ ಟೆನ್ ಶನ್ ವಿದ್ಯುತ್ ತಂತಿ ಸ್ಪರ್ಶಿಸಿ ಫೈಟರ್ ವಿವೇಕ್ ಸಾವನ್ನಪ್ಪಿದ್ದರು. ಅಲ್ಲದೇ ಓರ್ವ ಕಲಾವಿದನಿಗೂ ಗಾಯಗಳಾಗಿದ್ದವು.
ಈ ಪ್ರಕರಣ ಸಂಬಂಧ ಬಿಡದಿ ಪೊಲೀಸರು, ನಿರ್ದೇಶಕ ಶಂಕರ್ ರಾಜ್, ನಿರ್ಮಾಪಕ ಗುರು ದೇಶಪಾಂಡೆ ಹಾಗೂ ಫೈಟ್ ಮಾಸ್ಟರ್ ವಿನೋದ್ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.