ಒಲಿಂಪಿಕ್ಸ್ ನಿಂದ ಕೆಲ ಕ್ರೀಡೆಯನ್ನು ತೆಗೆದುಹಾಕುವ ಅಧಿಕಾರವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗೆ ನೀಡಲಾಗಿದೆ. ಹೆಚ್ಚು ನಿಯಮ ಉಲ್ಲಂಘನೆಯಾಗುವ ಕ್ರೀಡೆಗಳನ್ನು ಪ್ಯಾರಿಸ್ ಒಲಿಂಪಿಕ್ಸ್ 2021ರಲ್ಲಿ ತೆಗೆದುಹಾಕುವ ಸಾಧ್ಯತೆಯಿದೆ.
ವೇಟ್ ಲಿಫ್ಟಿಂಗ್ ಮತ್ತು ಬಾಕ್ಸಿಂಗ್ನಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರ್ತಿದೆ. ಈ ಬಗ್ಗೆ ಐಒಸಿಯ ಸದಸ್ಯರು ಮತದಾನ ಮಾಡಿದ್ದಾರೆ. ಐಒಸಿ ಕಾರ್ಯನಿರ್ವಾಹಕ ಮಂಡಳಿಯ ನಿರ್ಧಾರಗಳನ್ನು ಅನುಸರಿಸದಿದ್ದರೆ ಅಥವಾ ಒಲಿಂಪಿಕ್ಸ್ ಪ್ರತಿಷ್ಠೆಯನ್ನು ಹಾಳುಮಾಡುವಂತಹ ಕೆಲಸಗಳನ್ನು ಮಾಡಿದರೆ, ಐಒಸಿ ಅವರನ್ನು ಒಲಿಂಪಿಕ್ಸ್ ಕಾರ್ಯಕ್ರಮದಿಂದ ತೆಗೆದುಹಾಕಬಹುದು.
ದೀರ್ಘ ಕಾಲದಿಂದ ಡೋಪಿಂಗ್ ಸಮಸ್ಯೆ ಎದುರಿಸುತ್ತಿರುವ ವೇಟ್ ಲಿಫ್ಟಿಂಗ್, ಒಲಂಪಿಕ್ಸ್ ನಿಂದ ಹೊರಗುಳಿಯುವ ಸಾಧ್ಯತೆಯಿದೆ. ಪ್ಯಾರಿಸ್ ಒಲಿಂಪಿಕ್ಸ್ 2021 ರಿಂದ ವೇಟ್ ಲಿಫ್ಟಿಂಗ್ ತೆಗೆದುಹಾಕುವ ಸಾಧ್ಯತೆಯಿದೆ. ವೇಟ್ ಲಿಫ್ಟಿಂಗ್ ನಲ್ಲಿ ಭಾರತಕ್ಕೆ ಪ್ರಶಸ್ತಿ ಬಂದಿದೆ. ಟೋಕಿಯೊ ಒಲಂಪಿಕ್ಸ್ ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ. ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ ಕಠಿಣ ನಿರ್ಧಾರ ತೆಗೆದುಕೊಂಡರೆ, ಭಾರತ ಸೇರಿದಂತೆ ಹಲವು ದೇಶಗಳ ಆಟಗಾರರಿಗೆ ನಿರಾಶೆಯಾಗಲಿದೆ.