alex Certify ರೈತರ ಮಕ್ಕಳ ಖಾತೆಗೆ ನೇರ ನಗದು: ‘ಶಿಷ್ಯವೇತನ’ ಜಾರಿ, ಸಿಎಂಗೆ ಬಿ.ಸಿ. ಪಾಟೀಲ್ ಧನ್ಯವಾದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರ ಮಕ್ಕಳ ಖಾತೆಗೆ ನೇರ ನಗದು: ‘ಶಿಷ್ಯವೇತನ’ ಜಾರಿ, ಸಿಎಂಗೆ ಬಿ.ಸಿ. ಪಾಟೀಲ್ ಧನ್ಯವಾದ

ಬೆಂಗಳೂರು: ಸಚಿವ ಸಂಪುಟದ ನಿರ್ಣಯದಂತೆ ಸರ್ಕಾರ ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹೊಸ ಶಿಷ್ಯವೇತನ(Scholarship) ಯೋಜನೆಯನ್ನು ಜಾರಿಗೆ ತರಲು ಯೋಜನೆಯ ರೂಪುರೇಷೆಗಳನ್ನು ರಚಿಸಿ  ಆದೇಶಿಸಿದೆ.

ಎಸ್.ಎಸ್.ಎಲ್.ಸಿ ಅಥವಾ 10 ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿರುವ, ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು /ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳವರೆಗೆ ಪ್ರವೇಶವನ್ನು ಪಡೆದಿರುವ ಕರ್ನಾಟಕ ರಾಜ್ಯದ ರೈತರ ಎಲ್ಲಾ ಮಕ್ಕಳ ಬ್ಯಾಂಕ್‌ ಗಳ ಖಾತೆಗಳಿಗೆ ನೇರ ನಗದು ವರ್ಗಾವಣೆ (Direct Benefit Transfer) ಪದ್ಧತಿಯ ಮೂಲಕ ಜಮಾ ಮಾಡಲಾಗುವುದು.

2021-22ನೇ ಸಾಲಿನಿಂದ ಜಾರಿಗೆ ಬರುವಂತೆ ಶಿಷ್ಯವೇತನದ ಹಣದ ಮೊತ್ತವನ್ನು ವಾರ್ಷಿಕ ಶಿಷ್ಯವೇತನ ರೂಪದಲ್ಲಿ ಒದಗಿಸಲು ಮತ್ತು ಪಾವತಿಸಲು ಸರ್ಕಾರ ಅನುಮೋದನೆ ನೀಡಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ರೈತರ ಪರವಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಧನ್ಯವಾದ ಸಲ್ಲಿಸಿದ್ದಾರೆ.

ಪಿಯುಸಿ, ಡಿಪ್ಲೊಮಾ, ಐಟಿಐ ವಿದ್ಯಾರ್ಥಿಗಳಿಗೆ 2,500 ರೂ., ವಿದ್ಯಾರ್ಥಿನಿಯರಿಗೆ 3,000 ರೂ. ನೀಡಲಾಗುವುದು

ಪದವಿಯ ಬಿಎ, ಬಿಎಸ್ಸಿ, ಬಿಕಾಂ ವಿದ್ಯಾರ್ಥಿಗಳಿಗೆ 5000 ರೂಪಾಯಿ ಮತ್ತು ವಿದ್ಯಾರ್ಥಿನಿಯರಿಗೆ 5500 ರೂ. ನೀಡಲಾಗುವುದು.

ಎಲ್.ಎಲ್.ಬಿ., ಪ್ಯಾರಾಮೆಡಿಕಲ್,  ಬಿ ಫಾರ್ಮಾ, ನರ್ಸಿಂಗ್ ವಿದ್ಯಾರ್ಥಿಗಳಿಗೆ 7,500 ರೂಪಾಯಿ, ವಿದ್ಯಾರ್ಥಿನಿಯರಿಗೆ 8000 ರೂ. ನೀಡಲಾಗುವುದು.

ಎಂಬಿಬಿಎಸ್, ಬಿಇ, ಬಿಟೆಕ್, ಪಿಜಿ, ವಿದ್ಯಾರ್ಥಿಗಳಿಗೆ 10,000 ರೂ., ವಿದ್ಯಾರ್ಥಿನಿಯರಿಗೆ 11,000 ರೂಪಾಯಿ ನೀಡಲಾಗುತ್ತದೆ. ಕೃಷಿ ಜಮೀನು ಹೊಂದಿರುವ ರೈತರ ಮಕ್ಕಳಿಗೆ ಶಿಷ್ಯವೇತನ ನೀಡಲಾಗುವುದು ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...