alex Certify BIG NEWS: ‘ಆ ಇಬ್ಬರು ನಿರೂಪಕರಿಂದ ಅನ್ಯಾಯ’; ಸಿಎಂ ಮನೆ ಮುಂದೆ ಮಹಿಳೆ ಏಕಾಂಗಿ ಪ್ರತಿಭಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ಆ ಇಬ್ಬರು ನಿರೂಪಕರಿಂದ ಅನ್ಯಾಯ’; ಸಿಎಂ ಮನೆ ಮುಂದೆ ಮಹಿಳೆ ಏಕಾಂಗಿ ಪ್ರತಿಭಟನೆ

ಬೆಂಗಳೂರು: ನಿರೂಪಕರನ್ನು ಬದಲಾಯಿಸುವಂತೆ ಒತ್ತಾಯಿಸಿ ಮಹಿಳೆಯೊಬ್ಬರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಿವಾಸದ ಎದುರು ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಡಾ.ಗಿರಿಜಾ ಪ್ರತಿಭಟನಾ ನಿರತ ಮಹಿಳೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೊಸ ನಿರೂಪಕರಿಗೆ ಅವಕಾಶ ಮಾಡಿಕೊಡಬೇಕು. ಈಗಿರುವ ನಿರೂಪಕರಾದ ಅಪರ್ಣಾ ಹಾಗೂ ಶಂಕರ್ ಪ್ರಕಾಶ್ ಈ ಇಬ್ಬರಿಂದ ಸಾಕಷ್ಟು ನಿರೂಪಕರಿಗೆ ಅನ್ಯಾಯವಾಗಿದೆ. ಹೀಗಾದರೆ ಉಳಿದ ನಿರೂಪಕರು, ಕಲಾವಿದರು, ಸಾಹಿತಿಗಳು ಬದುಕುವುದಾದರು ಹೇಗೆ? ಎಂದು ಕಣ್ಣೀರಿಟ್ಟಿದ್ದಾರೆ.

ಸಾಕಷ್ಟು ಉತ್ತಮ ನಿರೂಪಕರಿದ್ದಾರೆ. ಆದರೆ ಅಪರ್ಣಾ, ಶಂಕರ್ ಪ್ರಕಾಶ್ ಇವರಿಬ್ಬರಿಂದ ಬೇರೆ ಯಾರಿಗೂ ಅವಕಾಶಗಳು ಸಿಗುತ್ತಿಲ್ಲ. ಹೀಗಾದರೆ ಉಳಿದವರು ಎಲ್ಲಿಗೆ ಹೋಗಬೇಕು? ಈಗ ಹೊಸ ಸರ್ಕಾರ ಬಂದಿದೆ. ಹಾಗಾಗಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೊಸಬರಿಗೆ ಅವಕಾಶ ನೀಡಿ ಎಂದು ಒತ್ತಾಯಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...