ಆನ್ಲೈನ್ನಲ್ಲಿ ಭೇಟಿಯಾದ ವ್ಯಕ್ತಿಯೊಬ್ಬನೊಂದಿಗೆ ಮದುವೆಯ ಡೇಟ್ ಫಿಕ್ಸ್ ಮಾಡಿಕೊಂಡ ಮಹಿಳೆಯೊಬ್ಬಳಿಗೆ ಆತ ತನ್ನ ಮಾಜಿ ಪ್ರಿಯಕರ ಎಂದು ತಿಳಿದು ಲೈಫ್ಟೈಂ ಶಾಕ್ ಆಗಿದೆ.
ಇಂಗ್ಲೆಂಡ್ನ ಲಿವರ್ಪೂಲ್ನ ಎಮ್ಮಾ ಹೆಸರಿನ ಈ ಸಿಂಗಲ್ ಪೇರೆಂಟ್ ಹ್ಯಾರಿ ಎಂಬ ವ್ಯಕ್ತಿಯನ್ನು ಆನ್ಲೈನ್ನಲ್ಲಿ ಭೇಟಿಯಾಗಿದ್ದರು.
“ಆತ ನೋಡಲು ಚೆಂದ ಕಾಣುತ್ತಾನೆ ಎಲ್ಲದರಲ್ಲೂ ಪರಿಪೂರ್ಣನಾಗಿದ್ದಾನೆ. ನಿಜ ಹೇಳಬೇಕೆಂದರೆ ನಾನು ಆತನ ಮೇಲೆ ಹುಚ್ಚು ಹಿಡಿಸಿಕೊಂಡಿದ್ದೆ. ಆತ ಒಬ್ಬ ಉದ್ಯಮಿ ಹಾಗೂ ಒಳ್ಳೆ ಆಸ್ತಿ ಇಟ್ಟುಕೊಂಡಿದ್ದಾನೆ. ನನಗೆ ಮಾತನಾಡಬೇಕೆನಿಸಿದಾಗೆಲ್ಲಾ ಆತ ಲಭ್ಯವಿದ್ದ. ಆತ ಸುಂದರಾಂಗ, ಆತ ಫಿಟ್ ಇದ್ದಾನೆ,” ಎಂದು ಎಮ್ಮಾ ತನ್ನ ಈ ಬಾಯ್ಫ್ರೆಂಡ್ ಬಗ್ಗೆ ಹೇಳಿಕೊಂಡಿದ್ದಾರೆ.
ಗಮನಿಸಿ…! ಎರಡು ದಿನ ಭಾರೀ ಮಳೆ ಸಾಧ್ಯತೆ, ಯೆಲ್ಲೋ ಅಲರ್ಟ್ –ಕರಾವಳಿಯಲ್ಲಿ ಭಾರಿ ಗಾಳಿ
ಆದರೆ ಫೇಸ್ಟೈಮ್ನಲ್ಲಿ ಎಮ್ಮಾ ಜೊತೆಗೆ ಮಾತನಾಡುವಾಗೆಲ್ಲಾ ಕತ್ತಲ ಕೋಣೆಯಲ್ಲೇ ಇರುತ್ತಿದ್ದ ಹ್ಯಾರಿ ಆಕೆಗೆ ಸರಿಯಾಗಿ ತನ್ನ ಮುಖ ತೋರುತ್ತಲೇ ಇರಲಿಲ್ಲ.
ಕೊನೆಗೊಮ್ಮೆ ಇಬ್ಬರೂ ಭೇಟಿಯಾಗಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಎಮ್ಮಾ ಲಿವರ್ಪೂಲ್ನಿಂದ ಲಂಡನ್ಗೆ ಹೊರಟಿದ್ದಾರೆ. ಆದರೆ ತಾನು ದುಬಾಯ್ನಿಂದ ಬರಬೇಕಿದ್ದ ಫ್ಲೈಟ್ ಒಂದನ್ನು ಮಿಸ್ ಮಾಡಿಕೊಂಡ ಕಾರಣ ಅಂದು ಭೇಟಿಯಾಗಲು ಸಾಧ್ಯವಿಲ್ಲವೆಂದು ಹ್ಯಾರಿ ಹೇಳಿಕೊಂಡಿದ್ದಾನೆ.
ತನ್ನ ಆನ್ಲೈನ್ ಲವ್ವರ್ ಬಗ್ಗೆ ನಿಜಾಂಶ ಅರಿಯಲು ಎಂಟಿವಿಯ ಕ್ಯಾಟ್ಫಿಶ್ ಯುಕೆಯನ್ನು ಸಂಪರ್ಕಿಸಿದ ಎಮ್ಮಾಗೆ ಹ್ಯಾರಿ ತಾನು ಹೇಳಿಕೊಳ್ಳುತ್ತಿದ್ದಷ್ಟು ಸೌಂಡ್ ಪಾರ್ಟಿ ಅಲ್ಲ ಎಂದು ಅರಿವಿಗೆ ಬಂದಿದೆ. ಕೊನೆಗೆ ಹ್ಯಾರಿ ಎಂಬಾತ ನಕಲಿ ಗುರುತಿನಲ್ಲಿ ಆಕೆಯೊಂದಿಗೆ ಸಂಪರ್ಕದಲ್ಲಿರುವುದು ಖಾತ್ರಿಯಾಗಿದೆ.
ಕೊನೆಗೆ ಮಾರನೇ ದಿನ ಭೇಟಿಯಾದ ವೇಳೆ ಹ್ಯಾರಿ ಎಂದು ಹೇಳಿಕೊಂಡು ಬಂದಿದ್ದ ಆ ವ್ಯಕ್ತಿ ತನ್ನ ಮಾಜಿ ಪ್ರಿಯಕರ ಜಾರ್ಜ್ ಎಂದು ಎಮ್ಮಾಗೆ ತಿಳಿದುಬಂದಿದೆ. ತನ್ನ ಮಾಜಿ ಪ್ರಿಯತಮೆಯನ್ನು ಬಿಟ್ಟು ಇರಲಾಗದೇ ಇದ್ದ ಕಾರಣ ತಾನು ಹೀಗೆ ಮಾಡಿದ್ದಾಗಿ ಜಾರ್ಜ್ ಆಕೆಯ ಬಳಿ ಹೇಳಿಕೊಂಡಿದ್ದಾನೆ.
ಎಮ್ಮಾ ಹಾಗೂ ಜಾರ್ಜ್ ಸದ್ಯಕ್ಕೆ ಫ್ರೆಂಡ್ಸ್ ಆಗಿದ್ದಾರೆ ಎಂದು ಎಂಟಿವಿ ಶೋ ತಿಳಿಸಿದೆ.