ಕ್ಯಾಲಿಫೋರ್ನಿಯಾ: ಹಲವು ಮಂದಿ ರೆಸ್ಟೋರೆಂಟ್ ಗೆ ಹೋಗಿ ಊಟ ಮಾಡಲು ಇಷ್ಟಪಡುತ್ತಾರೆ. ಆದರೆ ಇನ್ನೂ ಕೆಲವರಿಗೆ ತಾವು ಯಾವ ರೆಸ್ಟೋರೆಂಟ್ ಗೆ ಹೋಗಬೇಕು ಅನ್ನೋ ಬಗ್ಗೆ ತಲೆಬಿಸಿ ಶುರುವಾಗತ್ತೆ. ಕೆಲವರು ಗಂಟೆಯಾದ್ರೂ ಮೊಬೈಲ್ ತಡಕಾಡುತ್ತಲೇ ಇರುತ್ತಾರೆ. ಅದಕ್ಕೆಂದೆ ಇಲ್ಲೊಬ್ಬಾಕೆ ಗೆಳೆಯ ಯಾವ ರೀತಿ ಪ್ಲಾನ್ ಮಾಡಿದ್ದಾನೆ ಗೊತ್ತಾ..?
ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಆಗಮ್ ಬಡೇಚಾ ಅವರು, ನ್ಯೂಯಾರ್ಕ್‌ನಲ್ಲಿ ಕಾನೂನು ವಿದ್ಯಾರ್ಥಿನಿಯಾಗಿರುವ ತನ್ನ ಗೆಳತಿ ಕ್ರಿಸ್ಟಿನ್ ಸನ್ ಗೆ ವಿಶಿಷ್ಟ ಉಡುಗೊರೆ ನೀಡಿದ್ದಾನೆ. ಅದೇನೆಂದರೆ ಕೇವಲ 10 ಸೆಕೆಂಡುಗಳಲ್ಲಿ ರೆಸ್ಟೋರೆಂಟ್ ನ್ನು ಆಯ್ಕೆ ಮಾಡುವಂತಹ ಗಿಫ್ಟ್ ನೀಡಿದ್ದಾನೆ.
ACCIDENT: ಲಾರಿ ಡಿಕ್ಕಿ, ಕಾರ್ ನಲ್ಲಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು
ಹೌದು, 21 ವರ್ಷದ ಈತ ತನ್ನ ಕೋಡಿಂಗ್ ಕೌಶಲ್ಯವನ್ನು ಉಪಯೋಗಿಸಿ ಕಂಪ್ಯೂಟರ್ ಪ್ರೋಗ್ರಾಂ ಅನ್ನು ವಿನ್ಯಾಸಗೊಳಿಸಿದ್ದಾನೆ. ಇದು ತನ್ನ ಗೆಳತಿಗೆ ರೆಸ್ಟೋರೆಂಟ್ ನಲ್ಲಿ ತಿನ್ನಲು ಸ್ಥಳಗಳನ್ನು ಆಯ್ಕೆ ಮಾಡಲು ಸಹಾಯ ಮಾಡಿದೆ. ಹೀಗಾಗಿ ಇನ್ನುಮುಂದೆ ರೆಸ್ಟೋರೆಂಟ್ ಆಯ್ಕೆಗಾಗಿ ಆನ್ ಲೈನ್ ನಲ್ಲಿ ತಡಕಾಡಬೇಕೆಂದಿಲ್ಲ. ಸುಲಭವಾಗಿ ಕೇವಲ ಹತ್ತೇ ಸೆಕೆಂಡುಗಳಲ್ಲಿ ಆಕೆಗೆ ಬೇಕಿರುವ ರೆಸ್ಟೋರೆಂಟ್ ನ್ನು ಆಯ್ಕೆ ಮಾಡಬಹುದಾಗಿದೆ. ಇನ್ನು ಗೆಳೆಯನ ಈ ಉಡುಗೊರೆಗೆ ಗೆಳತಿ ಫುಲ್ ಖುಷಿಯಾಗಿದ್ದಾಳೆ.