ಬೀಜಿಂಗ್: 2,600 ವರ್ಷಗಳಷ್ಟು ಹಳೆಯ ಟಂಕಸಾಲೆ ಅಥವಾ ನಾಣ್ಯದ ಕಾರ್ಖಾನೆಯನ್ನು ಪುರಾತತ್ತ್ವಜ್ಞರು ಚೀನಾದ ಪೂರ್ವ ಹೆನಾನ್ ಪ್ರಾಂತ್ಯದಲ್ಲಿ ಪತ್ತೆ ಹಚ್ಚಿದ್ದಾರೆ. ಹಳದಿ ನದಿಯಿಂದ ದಕ್ಷಿಣಕ್ಕೆ 12 ಕಿಲೋಮೀಟರ್ ದೂರದಲ್ಲಿರುವ ಪ್ರಾಚೀನ ಚೀನಾದ ನಗರವಾದ ಗುವಾನ್ಜುವಾಂಗ್‌ನ ಉತ್ಖನನದ ಸಮಯದಲ್ಲಿ ಇದು ಪತ್ತೆಯಾಗಿದೆ. ಕ್ರಿ.ಪೂ. 800 ರಲ್ಲಿ ಸ್ಥಾಪಿಸಲಾಯಿತು ಎಂದು ನಂಬಲಾದ ಗುವಾನ್ಜುವಾಂಗ್ ನ್ನು 2011 ರಿಂದ ಉತ್ಖನನ ಮಾಡಲಾಗಿದೆ.
ಉತ್ಖನನಕಾರರು ಸಣ್ಣ ಸಲಿಕೆ ಆಕಾರದ ಕಂಚಿನ ನಾಣ್ಯಗಳನ್ನು ಕಂಡುಕೊಂಡರು. ಟಂಕಸಾಲೆಯು ಕ್ರಿ.ಪೂ 640, 550ರಲ್ಲಿ ಕಾರ್ಯನಿರ್ವಹಿಸುತ್ತಿತ್ತು ಅಂತಾ ಸಂಶೋಧಕರು ನಂಬಿದ್ದಾರೆ. ಟರ್ಕಿಯಲ್ಲಿ ಕಂಡು ಬರುವ ಲಿಡಿಯನ್ ಸಿಂಹ ನಾಣ್ಯಗಳು ಸುಮಾರು ಕ್ರಿ.ಪೂ. 575 ರಷ್ಟು ಹಿಂದಿನ ನಾಣ್ಯಗಳು ಎಂದು ನಂಬಲಾಗಿದೆ. ಸದ್ಯ ಗುವಾನ್ಜುವಾಂಗ್ ನಲ್ಲಿರುವ ನಾಣ್ಯ ಕಾರ್ಖಾನೆಯು ವಿಶ್ವದ ಅತ್ಯಂತ ಹಳೆಯದಾದ ಟಂಕಸಾಲೆ ತಾಣವಾಗಿದೆ ಎಂದು ಲೇಖಕ ಮತ್ತು ಪುರಾತತ್ತ್ವ ಶಾಸ್ತ್ರಜ್ಞ ಹಾವೊ ಜಾವೊ ಹೇಳಿದ್ದಾರೆ.
ನೆನೆಗುದಿಗೆ ಬಿದ್ದಿರುವ ಬ್ರಾಹ್ಮಣೇತರ ಪೂಜಾರಿಗಳ ನೇಮಕಾತಿ
6 ಇಂಚುಗಳಿಗಿಂತ ಕಡಿಮೆ ಉದ್ದ ಮತ್ತು ಸುಮಾರು 2.5 ಇಂಚು ಅಗಲವಿರುವ ಸ್ಪೇಡ್‌ನ ಆಕಾರದಲ್ಲಿರುವ ನಾಣ್ಯವನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಕಂಚಿನ ನಾಣ್ಯದ ತೂಕ 27 ಗ್ರಾಂ ಇದೆ. ಇದು ನಾಲ್ಕು 10 ರೂಪಾಯಿ ನಾಣ್ಯಗಳ ತೂಕಕ್ಕಿಂತ ಸ್ವಲ್ಪ ಕಡಿಮೆಯಿದೆ. ಎರಡು ನಾಣ್ಯಗಳನ್ನು ಹೊರತುಪಡಿಸಿ, ಮಣ್ಣಿನ ಅಚ್ಚು ತುಂಬಿದ್ದ ನಾಣ್ಯಗಳನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ.
ಹಾವೋ ಪ್ರಕಾರ, ‘’ನಗರದ ಕಾರ್ಯಾಗಾರವು ಕ್ರಿ.ಪೂ 700 ರಲ್ಲಿ ಪ್ರಾರಂಭವಾಯಿತು. ನಗರದ ಸ್ಥಾಪನೆಯ ಸುಮಾರು 100 ವರ್ಷಗಳ ನಂತರ ಶಸ್ತ್ರಾಸ್ತ್ರಗಳು, ಉಪಕರಣಗಳು ಮತ್ತು ಧಾರ್ಮಿಕ ಹಡಗುಗಳನ್ನು ತಯಾರಿಸಲಾಯಿತು. ಸುಮಾರು 150 ವರ್ಷಗಳ ನಂತರ ನಗರದ ದಕ್ಷಿಣ ದ್ವಾರದ ಹೊರಗೆ ನಾಣ್ಯಗಳ ಮುದ್ರಣ ಆರಂಭವಾಯಿತು’’ ಎಂದು ಮಾಹಿತಿ ನೀಡಿದ್ದಾರೆ.