ಬೆಂಗಳೂರು: ಮೊದಲ ಬಾರಿಗೆ ಸಚಿವರಾಗಿ ಗೃಹ ಇಲಾಖೆಯಂತಹ ಮಹತ್ವದ ಖಾತೆ ಹುದ್ದೆಗೇರಿರುವ ಅರಗ ಜ್ಞಾನೇಂದ್ರ ಸಂತಸ ವ್ಯಕ್ತಪಡಿಸಿದ್ದು, ತಮಗೆ ಗೃಹ ಖಾತೆ ನೀಡುತ್ತಾರೆ ಎಂಬ ನಿರೀಕ್ಷೆ ಕೂಡ ಇರಲಿಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅರಗ ಜ್ಞಾನೇಂದ್ರ, ಇಂತದ್ದೇ ಖಾತೆ ಬೇಕು ಎಂದು ನಾನು ಬೇಡಿಕೆ ಇಟ್ಟಿರಲಿಲ್ಲ. ಇಷ್ಟುದೊಡ್ಡ ಖಾತೆ ನೀಡುತ್ತಾರೆ ಎಂಬ ನಿರೀಕ್ಷೆಯೂ ಇರಲಿಲ್ಲ. ಗೃಹ ಖಾತೆ ನೀಡಿರುವುದಕ್ಕೆ ಖುಷಿಯಾಗುತ್ತಿದೆ. ಪಕ್ಷದ ನಾಯಕರಿಗೆ ಆಭಾರಿಯಾಗಿದ್ದೇನೆ ಎಂದು ಹೇಳಿದರು.
BREAKING NEWS: ಕುಸ್ತಿಯಲ್ಲಿ ಬಜರಂಗ್ ಕಮಾಲ್: ಭಾರತಕ್ಕೆ ಇನ್ನೊಂದು ಕಂಚು
ಯಾವ ಖಾತೆ ದೊಡ್ಡದು ಅಲ್ಲ, ಯಾವ ಖಾತೆ ಚಿಕ್ಕದೂ ಅಲ್ಲ. ಅದನ್ನು ನಿಭಾಯಿಸುವ ವ್ಯಕ್ತಿ ಮೇಲೆ ನಿರ್ಧಾರವಾಗುತ್ತೆ. ಗೃಹ ಇಲಾಖೆ ಮಾತ್ರವಲ್ಲ ಎಲ್ಲಾ ಇಲಾಖೆಗಳಲ್ಲೂ ಅದರದ್ದೇ ಆದ ಸವಾಲುಗಳಿರುತ್ತವೆ. ನನ್ನ ಇಲಾಖೆ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದ್ದಾರೆ.