ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಡಿಪಿಎಆರ್, ಆರ್ಥಿಕ ಇಲಾಖೆ, ಬೆಂಗಳೂರು ಅಭಿವೃದ್ಧಿ ಸೇರಿದಂತೆ ನಾಲ್ಕು ಖಾತೆಗಳನ್ನು ಸಿಎಂ ಬೊಮ್ಮಾಯಿ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಶಶಿಕಲಾ ಜೊಲ್ಲೆ ಹೊರತುಪಡಿಸಿ ಉಳಿದ ಬಹುತೇಕ ಸಚಿವರಿಗೂ ಅದೇ ಖಾತೆಯಲ್ಲಿ ಮುಂದುವರೆಸಲಾಗಿದೆ. ಪ್ರಮುಖವಾಗಿ ಅರಗ ಜ್ನಾನೇಂದ್ರಗೆ ಗೃಹ ಖಾತೆ ಹಾಗೂ ಶಶಿಕಲಾ ಜೊಲ್ಲೆ ಅವರಿಗೆ ಮುಜರಾಯಿ, ಹಜ್, ವಕ್ಫ್ ಖಾತೆ ನೀಡಲಾಗಿದೆ.
1- ಗೋವಿಂದ ಕಾರಜೋಳ – ಸಣ್ಣ ಮಧ್ಯಮ ನಿರಾವರಿ ಜಲಸಂಪನ್ಮೂಲ
2- ಕೆ ಎಸ್ ಈಶ್ವರಪ್ಪ – ಗ್ರಾಮೀಣಾಭಿವೃದ್ಧಿ ಇಲಾಖೆ
3 -ಆರ್ ಅಶೋಕ್ – ಕಂದಾಯ ಇಲಾಖೆ
4-ಡಾ ಅಶ್ವಥ್ ನಾರಾಯಣ – ಐಟಿಬಿಟಿ, ಉನ್ನತ ಶಿಕ್ಷಣ
5-ಬಿ ಶ್ರೀರಾಮುಲು – ಸಮಾಜಕಲ್ಯಾಣ, ಸಾರಿಗೆ ಇಲಾಖೆ
6-ವಿ ಸೋಮಣ್ಣ – ವಸತಿ
7- ಜೆ ಸಿ ಮಾಧುಸ್ವಾಮಿ – ಸಣ್ಣ ನಿರಾವರಿ, ಕಾನೂನು
8 – ಸಿ ಸಿ ಪಾಟೀಲ್ – ಪಿಡಬ್ಲ್ಯೂ ಡಿ
9- ಪ್ರಭು ಚವಾಣ – ಪಶುಸಂಗೋಪನೆ
10- ಆನಂದ್ ಸಿಂಗ್ – ಪರಿಸರ
11-ಕೆ. ಗೋಪಾಲಯ್ಯ – ಅಬಕಾರಿ
12 ಭೈರತಿ ಬಸವರಾಜ – ನಗರಾಭಿವೃದ್ಧಿ
13- ಎಸ್ ಟಿ ಸೋಮಶೇಖರ – ಸಹಕಾರಿ
14- ಬಿ ಸಿ ಪಾಟೀಲ್ – ಕೃಷಿ ಇಲಾಖೆ
15-ಕೆ ಸುಧಾಕರ್ – ಆರೋಗ್ಯ ಮತ್ತು ವೈದ್ಯಕೀಯ
16 ಕೆ ಸಿ ನಾರಾಯಣಗೌಡ – ಯುವಜನ ಮತ್ತು ಕ್ರೀಡೆ
17- ಶಿವರಾಮ ಹೆಬ್ಬಾರ್ – ಕಾರ್ಮಿಕ ಖಾತೆ
18- ಉಮೇಶ್ ಕತ್ತಿ – ಅರಣ್ಯ ಮತ್ತು ಆಹಾರ
19 ಎಸ್ ಅಂಗಾರಾ – ಬಂದರು, ಮೀನುಗಾರಿಕೆ
20 ಮುರುಗೇಶ್ ನಿರಾಣಿ – ಭಾರಿ ಮತ್ತು ಮಧ್ಯಮ ಕೈಗಾರಿಕೆ
21 -ಎಂ ಟಿ ಬಿ ನಾಗರಾಜ – ಪೌರಾಡಳಿತ, ಸಣ್ಣ ನೀರಾವರಿ
22- ಕೋಟ ಶ್ರೀನಿವಾಸ ಪೂಜಾರಿ – ಸಮಾಜ ಕಲ್ಯಾಣ
23- ಶಶಿಕಲಾ ಜೊಲ್ಲೆ – ಮುಜರಾಯಿ, ಹಜ್ , ವಕ್ಫ್
24- ವಿ ಸುನಿಲ್ ಕುಮಾರ್ – ಇಂಧನ, ಕನ್ನಡ ಮತ್ತು ಸಂಸ್ಕೃತಿ
25- ಹಾಲಪ್ಪ ಆಚಾರ್ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
26- ಅರಗ ಜ್ಞಾನೇಂದ್ರ – ಗೃಹ ಖಾತೆ
27 ಶಂಕರ್ ಪಾಟೀಲ್ ಮುನೇನಕೊಪ್ಪ-ಜವಳಿ ಖಾತೆ
28. ಬಿ.ಸಿ.ನಾಗೇಶ್- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
29. ಮುನಿರತ್ನ- ತೋಟಗಾರಿಕೆ