alex Certify ಮಕ್ಕಳ ಅಶ್ಲೀಲ ಚಿತ್ರಗಳನ್ನು ಇನ್ಮುಂದೆ ಸುಲಭವಾಗಿ ಪತ್ತೆ ಹಚ್ಚಲಿದೆ ಐ ಫೋನ್​…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳ ಅಶ್ಲೀಲ ಚಿತ್ರಗಳನ್ನು ಇನ್ಮುಂದೆ ಸುಲಭವಾಗಿ ಪತ್ತೆ ಹಚ್ಚಲಿದೆ ಐ ಫೋನ್​…..!

ಆ್ಯಪಲ್​ ಕಂಪನಿಯು ಹೊಸದೊಂದು ವೈಶಿಷ್ಟ್ಯವನ್ನ ಅಭಿವೃದ್ಧಿ ಪಡಿಸಲು ಮುಂದಾಗಿದ್ದು ಈ ಸೌಲಭ್ಯದ ಮೂಲಕ ಐ ಫೋನ್​​ನಲ್ಲಿ ಮಕ್ಕಳ ಅಶ್ಲೀಲ ಫೋಟೋಗಳನ್ನು ಗುರುತಿಸಬಹುದಾಗಿದೆ. ಮಕ್ಕಳ ಅಶ್ಲೀಲತೆ ಸಂಬಂಧ ಈ ಹಿಂದೆ ಇದ್ದ ಆ್ಯಪ್​ನ್ನು ಆ್ಯಪ್​ ಸ್ಟೋರ್​ನಿಂದ ತೆಗೆದು ಹಾಕಲಾಗಿತ್ತು. ಆದರೆ ಇದೀಗ ಇದಕ್ಕೆ ಸಂಬಂಧಿಸಿದ ಪ್ರತ್ಯೇಕ ಸೌಲಭ್ಯವನ್ನು ಪರಿಚಯಿಸಲಾಗ್ತಿದೆ ಎನ್ನಲಾಗಿದೆ. ಫೋಟೋ ಹ್ಯಾಶಿಂಗ್​ ಬಳಸಿ ಐಫೋನ್​​ಗಳಲ್ಲಿ ಮಕ್ಕಳ ಅಶ್ಲೀಲ ಫೋಟೋಗಳನ್ನು ಗುರುತಿಸಬಹುದಾಗಿದೆ.

ಅಂದಹಾಗೆ ಆ್ಯಪಲ್​ ಕಂಪನಿ ಈ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಆದರೆ ಈ ಬಗ್ಗೆ ಸೆಕ್ಯೂರಿಟಿ ಎಕ್ಸ್​ಪರ್ಟ್​ ಮ್ಯಾಥ್ಯೂ ಗ್ರೀನ್​ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.

ಗ್ರೀನ್​ ನೀಡಿರುವ ಮಾಹಿತಿಯ ಪ್ರಕಾರ, ಈ ವೈಶಿಷ್ಟ್ಯವು ಐಫೋನ್​ಗಳಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ಪತ್ತೆ ಹಚ್ಚಲು ವರದಾನವಾಗಿದೆ. ಗ್ರೀನ್​ ಹಾಗೂ ಜಾನ್ಸ್​ ಹಾಪ್ಕಿನ್ಸ್​ ಯೂನಿವರ್ಸಿಟಿ ಈ ಹಿಂದೆ ಆ್ಯಪಲ್​​ ಮೆಸೇಜ್​​ ಸೆಕ್ಯೂರಿಟಿ ಬಗ್​ನಲ್ಲಿ ಜಂಟಿಯಾಗಿ ಕೆಲಸ ನಿರ್ವಹಿಸಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...