alex Certify ‘ಮಸಾಲೆ ದೋಸೆ ಬೊಂಬಾಟ್ ಗುರು’ ಅಂದ್ರು ಬ್ರಿಟೀಷ್ ಹೈಕಮೀಷನರ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮಸಾಲೆ ದೋಸೆ ಬೊಂಬಾಟ್ ಗುರು’ ಅಂದ್ರು ಬ್ರಿಟೀಷ್ ಹೈಕಮೀಷನರ್..!

ಬೆಂಗಳೂರು: ಮಸಾಲೆ ದೋಸೆ ಬೊಂಬಾಟ್ ಗುರು ಅಂತಾ ಬ್ರಿಟೀಷ್ ಹೈಕಮೀಷನರ್ ಕನ್ನಡದಲ್ಲಿ ಟ್ವೀಟ್ ಮಾಡುವ ಮುಖಾಂತರ ಕನ್ನಡಿಗರ ಮನಗೆದ್ದಿದ್ದಾರೆ.

ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿದ್ದ ಬ್ರಿಟೀಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ದಕ್ಷಿಣ ಭಾರತದ ಸವಿಯಾದ ದೋಸೆಯ ಬಗ್ಗೆ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲೂ ಕನ್ನಡದಲ್ಲೇ ಟ್ವೀಟ್ ಮಾಡುವ ಮುಖಾಂತರ ಕನ್ನಡಿಗರ ಮನಗೆದ್ದಿದ್ದಾರೆ.

ಸಾಮಾನ್ಯವಾಗಿ ಬೆಂಗಳೂರಿಗರು ಉಪಯೋಗಿಸುವ ಸಖತ್ತಾಗಿದೆ, ಸೂಪರ್ ಗುರು ಶಬ್ಧಗಳು- ಸರಳವಾಗಿ ಅದ್ಭುತವಾಗಿದೆ ಎಂದಿದ್ದಾರೆ.

ಕರ್ನಾಟಕದಲ್ಲಿ ತಮ್ಮ ಪ್ರವಾಸವನ್ನು ಆರಂಭಿಸಿದ ಬಳಿಕ ಅವರು ಸರಳವಾಗಿ ಸೂಪರ್ ಎಂದು ಹೇಳುವ ಮುಖಾಂತರ ದೋಸೆ ತಿನ್ನುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಬಳಿಕ ಇಂಗ್ಲೀಷ್ ಭಾಷೆಯಲ್ಲಿ ಸರಣಿ ಟ್ವೀಟ್ ಗಳನ್ನು ಪೋಸ್ಟ್ ಮಾಡಿದ್ರೂ, ಅವರು ಕೆಲವು ಕನ್ನಡ ಶಬ್ಧಗಳನ್ನು ಬರೆದಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಟ್ಯಾಗ್ ಮಾಡಿ, ನಮಸ್ಕಾರ ಮುಖ್ಯಮಂತ್ರಿಯವರೆ ಎಂದು ಬರೆದು ಪೋಸ್ಟ್ ಮಾಡಿದ್ದರೆ. ಅವರ ಭೇಟಿ ಕೊನೆಗೊಂಡ ಬಳಿಕ ಧನ್ಯವಾದ ಮುಖ್ಯಮಂತ್ರಿಯವರೇ ಅಂತಾ ಟ್ವೀಟ್ ಮಾಡಿದ್ದಾರೆ.

ಒಂದೇ ಬಾರಿ 300 ಬರ್ಗರ್‌ ಮತ್ತು 100 ಡ್ರಿಂಕ್ಸ್ ಆರ್ಡರ್‌ ಮಾಡಿದ ಗ್ರಾಹಕ

ಇನ್ನು ಎಲ್ಲಿಸ್ ಅವರು ದಕ್ಷಿಣ ಭಾರತದ ಸವಿಯಾದ ಮಸಾಲಾ ದೋಸೆಯ ಬಗ್ಗೆ ತನ್ನ ಅನುಭವದ ಕುರಿತು ಟ್ವಿಟ್ಟರ್ ನಲ್ಲಿ ಸಮೀಕ್ಷೆಯನ್ನೇ ಮಾಡಿದ್ದಾರೆ. ಆಗಸ್ಟ್ 4ರಂದು ಚಮಚ ಉಪಯೋಗಿಸಿ ದೋಸೆ ಸೇವಿಸಿ ಟ್ವೀಟ್ ಮಾಡಿದ್ದ ಅವರು, ದಕ್ಷಿಣ ಭಾರತೀಯರೇ, ನಾಳೆಯ ದೋಸೆಯನ್ನು ನಾನು ಹೇಗೆ ತಿನ್ನುತ್ತೇನೆ? ಎಂದು ಪ್ರಶ್ನೆ ಮಾಡಿದ್ರು. ಸಮೀಕ್ಷೆಯ ಫಲಿತಾಂಶದ ನಂತರ ಅವರು ತಮ್ಮ ಕೈಗಳಿಂದಲೇ ದೋಸೆ ಸೇವಿಸಿದ್ರು.

ಜೊತೆಗೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ಚಾಕು, ಪೋರ್ಕ್ ಬದಲು ಬರಿಗೈಯಲ್ಲಿ ಮಸಾಲೆ ದೋಸೆ ತಿನ್ನುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಕೈಯಿಂದ ತಿಂದರೆ ಉತ್ತಮ ರುಚಿ ನೀಡುತ್ತದೆ ಎಂದು ಆನಂದದಿಂದ ಹೇಳಿದ್ದಾರೆ. ಅಲ್ಲದೆ ಮಸಾಲೆ ದೋಸೆ ಬೊಂಬಾಟ್ ಗುರು ಅಂತಾ ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ.

https://twitter.com/Yashwan05000625/status/1423390044169981952?ref_src=twsrc%5Etfw%7Ctwcamp%5Etweetembed%7Ctwterm%5E1423390044169981952%7Ctwgr%5E%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Ftimesnownewsenglish-epaper-tnneng%2Fmasaladosabombatgurubritishhighcommissioneralexellistweetsinkannadawinhearts-newsid-n304890778%3Fs%3Dauu%3D0xdff3e3d0c6f16833ss%3Dpd

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...