ಟೋಕಿಯೋ ಒಲಿಂಪಿಕ್ಸ್ನ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ನಲ್ಲಿ ಕಂಚಿನ ಪದಕ ಗೆದ್ದ ಪಿ.ವಿ. ಸಿಂಧು ಹೈದರಾಬಾದ್ಗೆ ಬಂದಿಳಿಯುತ್ತಲೇ ಅವರಿಗೆ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ನೀಡಲಾಗಿದೆ.
ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಆಗಿರುವ ಸಿಂಧು ತವರೂರಿಗೆ ಬಂದಿಳಿಯುತ್ತಲೇ ನಗುಮೊಗದಿಂದ ತಾವು ಗೆದ್ದು ಬಂದ ಪದಕವನ್ನು ಅಭಿಮಾನಿಗಳಿಗೆ ತೋರಿದ್ದಾರೆ.
ವಿದೇಶಿ ಪ್ರಜೆಗಳಿಗೆಂದೇ ‘ಲಸಿಕಾ ಪ್ರವಾಸೋದ್ಯಮ’ ಆರಂಭಿಸಿದ ಅಮೆರಿಕ..!
ಬೊಕೆ ಹಾಗೂ ಹೂವುಗಳ ಸುರಿಮಳೆಯೊಂದಿಗೆ ಸಿಂಧುರನ್ನು ಸ್ವಾಗತಿಸಿದ ಅಭಿಮಾನಿಗಳು, ಚಪ್ಪಾಳೆಯೊಂದಿಗೆ ತಮ್ಮೂರಿನ ಸಾಧಕಿಯನ್ನು ಬರಮಾಡಿಕೊಂಡಿದ್ದಾರೆ.
“ಹೃದಯಸ್ಪರ್ಶಿ ಸ್ವಾಗತದಿಂದ ನನಗೆ ಬಹಳ ಸಂತಸವಾಗಿದ್ದು, ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಮುಂದಿನ ದಿನಗಳಲ್ಲಿ ದೇಶಕ್ಕಾಗಿ ಇನ್ನಷ್ಟು ಪದಕಗಳನ್ನು ಗೆಲ್ಲಲು ಇನ್ನಷ್ಟು ಪರಿಶ್ರಮ ಹಾಕಲು ಮುಂದುವರೆಸುತ್ತೇನೆ” ಎಂದು ಸಿಂಧು ತಿಳಿಸಿದ್ದಾರೆ.