ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಬಿಹಾರದ ಜೋಡಿಯೊಂದಕ್ಕೆ ಸ್ಥಳೀಯರ ನೈತಿಕ ಪೊಲೀಸ್ಗಿರಿಯಿಂದ ಭಾರೀ ರೋದನೆ ಎದುರಿಸಬೇಕಾಗಿ ಬಂದ ವಿಡಿಯೋವೊಂದು ವೈರಲ್ ಆಗಿದೆ.
ರಾಯಲ್ ಎನ್ಫೀಲ್ಡ್ ಬೈಕ್ನಲ್ಲಿ ಕುಳಿತುಕೊಂಡು ಸಾರ್ವಜನಿಕವಾಗಿ ಭಾವನೆ ವ್ಯಕ್ತಪಡಿಸುತ್ತಿದ್ದ ಈ ಜೋಡಿಯ ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದ್ದು ಬಹಳ ವೈರಲ್ ಆಗಿದೆ.
ಕೃಷಿ ಯಂತ್ರೋಪಕರಣ ಖರೀದಿ: ರೈತರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್
ಜೋಡಿಯ ಈ ಸಮ್ಮತವಲ್ಲದ ವರ್ತನೆಯನ್ನು ವಿರೋಧಿಸುತ್ತಿರುವ ಸ್ಥಳೀಯರು ಇಬ್ಬರಿಗೂ ಚೆನ್ನಾಗಿ ಬಯ್ಯುತ್ತಿರುವ ವಿಡಿಯೋವನ್ನು ಗಯಾ ಜಿಲ್ಲೆಯ ಅಜ್ಞಾತ ಸ್ಥಳವೊಂದರಲ್ಲಿ ರೆಕಾರ್ಡ್ ಮಾಡಲಾಗಿದೆ.
ಈ ವಿಡಿಯೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ಬಂದಿದ್ದು, ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದು ಸರಿಯಲ್ಲ ಎಂದು ಕೆಲವರು ಅಂದರೆ ಮತ್ತೆ ಕೆಲವರು ಸ್ಥಳೀಯರು ಪ್ರೇಮಿಗಳ ಖಾಸಗಿ ವಿಚಾರದಲ್ಲಿ ಅನಾವಶ್ಯಕವಾಗಿ ತಲೆ ಹಾಕುತ್ತಿದ್ದಾರೆ ಎಂದಿದ್ದಾರೆ.