alex Certify ಮೆಚ್ಚುಗೆಗೆ ಪಾತ್ರವಾಯ್ತು ಊರಿನ ಹೆಸರು ಬದಲಾಯಿಸಲು ಈ ಗ್ರಾಮಸ್ಥರು ಕೊಟ್ಟ ಕಾರಣ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಚ್ಚುಗೆಗೆ ಪಾತ್ರವಾಯ್ತು ಊರಿನ ಹೆಸರು ಬದಲಾಯಿಸಲು ಈ ಗ್ರಾಮಸ್ಥರು ಕೊಟ್ಟ ಕಾರಣ….!

ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಮಹತ್ವದ ನಿರ್ಧಾರವನ್ನು ಮಧ್ಯ ಪ್ರದೇಶದ ಭೋಪಾಲ್​​ನ ಛತ್ತರ್​​ಪುರ ಜಿಲ್ಲೆಯ ಚಾಂದ್ಲಾ ವಿಧಾನಸಭಾ ಕ್ಷೇತ್ರದ ಮೊಹೋಯಿ ಗ್ರಾಮದ ನಿವಾಸಿಗಳು ಮುಂದಾಗಿದ್ದಾರೆ. ಈ ಜಿಲ್ಲೆಯಲ್ಲಿ ಜಾತಿಗೆ ಸಂಬಂಧಿಸಿದ ಊರಿನ ಹೆಸರು ಹಾಗೂ ಶಾಲೆಯ ಹೆಸರನ್ನು ಬದಲಾವಣೆ ಮಾಡಲು ನಿರ್ಧರಿಸಿದ್ದಾರೆ.

ಈ ಗ್ರಾಮವನ್ನು ಚಮರನ್​ ಪುರ್ವಾ ಹಾಗೂ ಶಾಲೆಯ ಹೆಸರನ್ನು ಚಮ್ರನ್​ ಪೂರ್ವಾ ಶಾಲೆ ಎಂದು ಕರೆಯಲಾಗುತ್ತದೆ. ಇದು ಒಂದು ನಿರ್ದಿಷ್ಟ ಜಾತಿಗೆ ಸಂಬಂಧಿಸಿದ ಹೆಸರಾಗಿದೆ ಅಂತಾರೆ ಗ್ರಾಮಸ್ಥರು.

ಈ ರೀತಿ ಜಾತಿಯ ಹೆಸರನ್ನು ಗ್ರಾಮಕ್ಕೆ ಇಟ್ಟಿರೋದು ಇವರಿಗೆ ಮುಜುಗರ ಎನಿಸುವ ವಿಚಾರವಂತೆ. ತಾವಿರುವ ಊರು ಹಾಗೂ ತಮ್ಮ ಮಕ್ಕಳು ಓದುವ ಶಾಲೆಯು ಇಂತಹ ಹೆಸರನ್ನ ಹೊಂದಿದ್ರೆ ಅದು ಜಾತಿ ವ್ಯವಸ್ಥೆ ಮೇಲೆ ಇನ್ನಷ್ಟು ಪ್ರಭಾವ ಬೀರುತ್ತೆ ಅನ್ನೋದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...