ಪುಣೆ: ಯುವತಿಯೊಬ್ಬಳು ನಡು ರಸ್ತೆಯಲ್ಲಿ ಮಲಗಿದ್ದಲ್ಲದೆ, ಉರುಳಾಡಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಳ್ಳಲು ಕಾರಣವಾಗಿದ್ದಾಳೆ. ಈಕೆ ಮದ್ಯ ಸೇವಿಸಿ ಈ ರೀತಿ ಅವಾಂತರ ಸೃಷ್ಟಿಸಿದ್ದಾಳೆ ಎಂದು ಶಂಕಿಸಲಾಗಿದೆ.
ಮಹಾರಾಷ್ಟ್ರದ ಪುಣೆಯ ಹೀರಾಬಾಗ್ ಚೌಕ್ ನಲ್ಲಿ ಈ ಘಟನೆ ನಡೆದಿದೆ. ವಾಹನಗಳು ರಸ್ತೆಯಲ್ಲಿ ಹಾದು ಹೋಗುತ್ತಿರಬೇಕಾದರೆ ಏಕಾಏಕಿ ಬಂದಂತಹ ಯುವತಿ ನಡುರಸ್ತೆಯಲ್ಲಿ ಉರುಳಾಡಿದ್ದಾಳೆ. ಚಾಲಕರು ಪಕ್ಕಕ್ಕೆ ಹೋಗುವಂತೆ ವಿನಂತಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ.
ಇನ್ನು ಯುವತಿ ರಸ್ತೆಯಲ್ಲಿ ಈ ರೀತಿ ಗಲಾಟೆ ಮಾಡುತ್ತಿರಬೇಕಾದರೆ ಕೆಲ ದಾರಿಹೋಕರು ಚಪ್ಪಾಳೆ ತಟ್ಟಿದರು ಎಂದು ವರದಿಯಾಗಿದೆ.
ಕೇಂದ್ರ ಸರ್ಕಾರಿ ನೌಕರರ ನಂತ್ರ ಹೆಚ್ಚಾಗ್ತಿದೆ ರಾಜ್ಯ ಸರ್ಕಾರಿ ನೌಕರರ ಸಂಬಳ
ಯುವತಿಯ ಅವಾಂತರ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಆಕೆ ಅಲ್ಲಿಂದ ಎಸ್ಕೇಪ್ ಆಗಿದ್ದಾಳೆ. ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗಿದೆ. ಸದ್ಯ ಈ ವಿಡಿಯೋವನ್ನು ಕೆಲವರು ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.