alex Certify ಕಂಚಿನ ಪದಕವನ್ನು ʼಕೊರೊನಾ ವಾರಿಯರ್ಸ್ʼ​ಗೆ ಅರ್ಪಿಸಿದ ಟೀಂ ಇಂಡಿಯಾ ಹಾಕಿ ತಂಡ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಂಚಿನ ಪದಕವನ್ನು ʼಕೊರೊನಾ ವಾರಿಯರ್ಸ್ʼ​ಗೆ ಅರ್ಪಿಸಿದ ಟೀಂ ಇಂಡಿಯಾ ಹಾಕಿ ತಂಡ..!

ಬರೋಬ್ಬರಿ 41 ವರ್ಷಗಳ ಬಳಿಕ ಒಲಿಂಪಿಕ್​ ಪಂದ್ಯದಲ್ಲಿ ಪದಕವನ್ನು ಸಂಪಾದಿಸುವಲ್ಲಿ ಭಾರತೀಯ ಪುರುಷರ ಹಾಕಿ ತಂಡ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಈ ಐತಿಹಾಸಿಕ ಗೆಲುವನ್ನ ಸ್ಕಿಪರ್​ ಮನ್​ಪ್ರೀತ್​ ಸಿಂಗ್​​​ ದೇಶದಲ್ಲಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಅರ್ಪಿಸಿದ್ದಾರೆ.

ಜಲಂಧರ್​ನ 29 ವರ್ಷದ ಮನ್​ಪ್ರೀತ್​ ಸಿಂಗ್​​ ಜರ್ಮನಿ ವಿರುದ್ಧ 5-4 ಗೋಲುಗಳ ಅಂತರದಲ್ಲಿ ಜಯ ಸಾಧಿಸಿದ ಬಳಿಕ ಮೂಕವಿಸ್ಮಿತರಾದರು. ಈ ಮೂಲಕ ಒಲಿಂಪಿಕ್​ ಪಂದ್ಯಾವಳಿಯಲ್ಲಿ ಭಾರತೀಯ ಹಾಕಿ ತಂಡ 12ನೇ ಪದಕವನ್ನು ಸಂಪಾದಿಸಿದಂತಾಗಿದೆ. ಆದರೆ ಈ 12ನೇ ಪದಕವು ಬರೋಬ್ಬರಿ 41 ವರ್ಷಗಳ ಕಾಯುವಿಕೆಯ ಬಳಿಕ ದೊರಕಿದೆ.

ಕೊನೆಯ ಬಾರಿಗೆ ಟೀಂ ಇಂಡಿಯಾ ಹಾಕಿ ತಂಡ 1980ರಲ್ಲಿ ಮಾಸ್ಕೋದಲ್ಲಿ ನಡೆದ ಒಲಿಂಪಿಕ್​ ಪಂದ್ಯಾವಳಿಯಲ್ಲಿ ಚಿನ್ನದ ಪದಕವನ್ನು ಗಳಿಸಿತ್ತು. ಈವರೆಗೆ ಭಾರತ ಒಟ್ಟು ಒಲಿಂಪಿಕ್​ ಪಂದ್ಯಾವಳಿಯಲ್ಲಿ 8 ಚಿನ್ನದ ಪದಕವನ್ನು ಸಂಪಾದಿಸಿದೆ.

ನನಗೆ ಈಗಲೇ ಏನು ಹೇಳಬೇಕು ಎಂದೇ ತಿಳಿಯುತ್ತಿಲ್ಲ. ಇದು ನಿಜಕ್ಕೂ ಅದ್ಭುತ ಅನುಭವವಾಗಿದೆ. ನಾವು ಈ ಪದಕಕ್ಕೆ ಅರ್ಹರಿದ್ದೇವೆ. ನಾವು ಕಳೆದ 15 ತಿಂಗಳಿನಿಂದ ಕಠಿಣ ಶ್ರಮ ವಹಿಸಿದ್ದೇವೆ. ಈ 15 ತಿಂಗಳು ನಮಗೆ ತುಂಬಾನೇ ಕಠಿಣವಾಗಿತ್ತು. ನಾವು ಬೆಂಗಳೂರಿನಲ್ಲಿ ಇದ್ದೆವು. ನಮ್ಮಲ್ಲಿ ಕೆಲವರಿಗೆ ಕೋವಿಡ್​ ಸೋಂಕು ಕೂಡ ತಗುಲಿತ್ತು ಎಂದು ಹೇಳಿದ್ರು.

ಈ ಪದಕವನ್ನು ನಾವು ದೇಶದ ಕೋವಿಡ್​ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿದ ಎಲ್ಲಾ ವೈದ್ಯರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಅರ್ಪಿಸುತ್ತೇವೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...