ವಿಶ್ವದಾದ್ಯಂತ ಚಿತ್ರ-ವಿಚಿತ್ರ ಸಂಪ್ರದಾಯಗಳು ರೂಢಿಯಲ್ಲಿವೆ. ಪ್ರತಿ ಜಾತಿ, ಧರ್ಮ, ಉಪ ಜಾತಿ, ಆಯಾ ಪ್ರದೇಶಗಳಲ್ಲಿ ಮದುವೆ ಸೇರಿದಂತೆ ಶುಭ ಕಾರ್ಯಗಳನ್ನು ಅವರದೇ ಪದ್ಧತಿಯಲ್ಲಿ ಮಾಡಲಾಗುತ್ತದೆ. ವಿಶ್ವದಲ್ಲಿ ಅಚ್ಚರಿ ಹುಟ್ಟಿಸುವ ಮದುವೆ ಸಂಪ್ರದಾಯಗಳಿವೆ.
ಚೀನಾದ ತುಜಿಯಾ ಸಮುದಾಯದಲ್ಲಿ ಮದುವೆಗೆ ಒಂದು ತಿಂಗಳ ಮೊದಲು, ವಧು ಮತ್ತು ಮನೆಯ ಉಳಿದ ಮಹಿಳೆಯರು ಪ್ರತಿದಿನ ಒಂದು ಗಂಟೆ ಅಳುತ್ತಾರೆ. ಈ ಸಂಪ್ರದಾಯವು ಶತಮಾನಗಳಿಂದ ನಡೆದುಕೊಂಡು ಬಂದಿದೆ. ಇದನ್ನು ಮಂಗಳಕರವೆಂದು ಪರಿಗಣಿಸಲಾಗಿದೆ.
ಗ್ರೀಕ್ ಸಂಪ್ರದಾಯದಲ್ಲಿ, ಅತಿಥಿಗಳು ಮತ್ತು ಕುಟುಂಬ ಸದಸ್ಯರು ಒಟ್ಟಿಗೆ ಆಹಾರ ಪ್ಲೇಟ್ ಒಡೆಯುತ್ತಾರೆ. ವಧುವರರಿಗೆ ಇದು ಅದೃಷ್ಟ ಎಂದು ಪರಿಗಣಿಸಲಾಗಿದೆ.
ಕೀನ್ಯಾದ ಬುಡಕಟ್ಟು ಜನಾಂಗದಲ್ಲಿ ವಧು ಮೇಲೆ ಉಗುಳಲಾಗುತ್ತದೆ. ತಂದೆ ತನ್ನ ಮಗಳ ತಲೆ ಹಾಗೂ ಎದೆ ಮೇಲೆ ಉಗುಳಿ ಆಶೀರ್ವಾದ ಮಾಡ್ತಾನೆ.
ಸ್ಕಾಟ್ಲೆಂಡ್‌ನಲ್ಲಿ, ಒಡೆದ ಹಾಲು, ಸತ್ತ ಮೀನು, ಹಾಳಾದ ಆಹಾರ, ಸಾಸ್, ಮಣ್ಣು ಸೇರಿದಂತೆ ಕೊಳಕು ವಸ್ತುಗಳನ್ನು ವಧುವಿನ ಮೇಲೆ ಎಸೆಯಲಾಗುತ್ತದೆ. ಅವಳು ಜೀವನದಲ್ಲಿ ಎಲ್ಲವನ್ನೂ ನಿಭಾಯಿಸಬಲ್ಲಳು ಎಂಬ ನಂಬಿಕೆಯಿಂದ ಹೀಗೆ ಮಾಡಲಾಗುತ್ತದೆ.