ಟೋಕಿಯೋ ಒಲಿಂಪಿಕ್ಸ್ನಲ್ಲಿ ಅರ್ಜೆಂಟೀನಾ ತಂಡದ ವಿರುದ್ಧ ಭಾರತೀಯ ಮಹಿಳಾ ಹಾಕಿ ತಂಡ ಬುಧವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಸೋಲನ್ನು ಕಂಡಿತ್ತು. ಆದರೆ ಇದಾದ ಬಳಿಕ ಭಾರತೀಯ ಮಹಿಳಾ ಹಾಕಿ ತಂಡದ ಆಟಗಾರ್ತಿ ಹರಿದ್ವಾರದ ರೋಷನ್ಬಾದ್ ನಿವಾಸಿ ವಂದನಾ ಕಠಾರಿಯಾರ ಮನೆ ಎದುರು ಬಂದ ಮೇಲ್ಜಾತಿಯ ಒಬ್ಬರು ಪುರುಷರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಮಹಿಳಾ ಹಾಕಿ ತಂಡದಲ್ಲಿ ಇಬ್ಬರು ದಲಿತ ಮಹಿಳೆಯರು ಇದ್ದುದರಿಂದಲೇ ಸೆಮಿಫೈನಲ್ನಲ್ಲಿ ಸೋಲನ್ನು ಕಂಡಿದೆ ಎಂದು ಹೇಳುವ ಮೂಲಕ ಜಾತಿ ನಿಂದನೆಯನ್ನೂ ಮಾಡಿದ್ದಾರೆ ಎಂದು ವಂದನಾ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
SHOCKING NEWS: ಕೊರೋನಾದಿಂದ ಪಾರಾದವರಿಗೆ ಶುಗರ್, ಗುಣಮುಖರಾದ ಶೇ. 14.46 ರಷ್ಟು ಮಂದಿಗೆ ಡಯಾಬಿಟಿಸ್
ಮಹಿಳಾ ಹಾಕಿ ತಂಡ ಸೆಮಿ ಫೈನಲ್ನಲ್ಲಿ ಸೋತ ಬಳಿಕ ನಾವೆಲ್ಲ ನಿರಾಶೆಗೆ ಒಳಗಾಗಿದ್ದೆವು. ಆದರೆ ಅರ್ಜೆಂಟೀನಾ ತಂಡಕ್ಕೆ ಕಠಿಣ ಪೈಪೋಟಿ ನೀಡಿದ್ದರ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ವಂದನಾ ಸಹೋದರ ಹೇಳಿದ್ದಾರೆ. ಒಲಿಂಪಿಕ್ ಪಂದ್ಯದಲ್ಲಿ ಟೀಂ ಇಂಡಿಯಾ ಮಹಿಳಾ ಹಾಕಿ ತಂಡ ಸೋಲುತ್ತಿದ್ದಂತೆಯೇ ನಮ್ಮ ಮನೆಯ ಮುಂದೆ ಪಟಾಕಿ ಸಿಡಿದ ಸದ್ದಾಯಿತು. ನಾವು ಹೊರಗೆ ಹೋಗಿ ನೋಡಿದರೆ ನಮ್ಮದೇ ಗ್ರಾಮದ ಇಬ್ಬರು ಮೇಲ್ಜಾತಿಯ ಪುರುಷರು ನಮ್ಮ ಮನೆಯ ಮುಂದೆ ಕುಣಿಯುತ್ತಿದ್ದರು ಎಂದು ಸಹೋದರ ಹೇಳಿದ್ದಾರೆ.
ವಂದನಾ ಕುಟುಂಬಸ್ಥರು ಮನೆಯಿಂದ ಆಚೆ ಬರುತ್ತಿದ್ದಂತೆಯೇ ಜಾತಿ ನಿಂದನೆ ಮಾಡಲಾಗಿದೆ. ಟೀಂ ಇಂಡಿಯಾದಲ್ಲಿ ಇಬ್ಬರು ದಲಿತ ಮಹಿಳೆಯರಿಗೆ ಸ್ಥಾನ ನೀಡಿದ್ದೇ ಈ ಸೋಲಿಗೆ ಕಾರಣವಾಗಿದೆ. ಹಾಕಿ ಮಾತ್ರವಲ್ಲದೇ ಪ್ರತಿ ಆಟದಿಂದಲೂ ದಲಿತರನ್ನು ದೂರವಿಡಬೇಕು ಎಂದು ಅವರು ಕಿರುಚುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.