ಮಕ್ಕಳು ಚೆನ್ನಾಗಿ ಊಟ ತಿಂಡಿ ಸೇವಿಸುತ್ತಾರೆ ಅಂದರೆ ಯಾವ ಪೋಷಕರಿಗೆ ಖುಷಿಯಾಗೋದಿಲ್ಲ ಹೇಳಿ. ಅದೇ ರೀತಿ 12 ವರ್ಷದ ಬಾಲಕ ಕೂಡ ದಿನಕ್ಕೆ 40 ಚಪಾತಿ ಸೇವನೆ ಮಾಡುತ್ತಿದ್ದರೂ ಪೋಷಕರು ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.
ಆದರೆ ಈ ಅಭ್ಯಾಸದಿಂದಾಗಿ ಮಧ್ಯ ಪ್ರದೇಶದ ಶಿವಪುರಿ ಜಿಲ್ಲೆಯ ಖೋಡ್ ಗ್ರಾಮದ ನಿವಾಸಿ ಸಂದೀಪ್ ತನ್ನ ಕಣ್ಣುಗಳನ್ನು ಕಳೆದುಕೊಳ್ಳುವ ಮೂಲಕ ಪೋಷಕರು ದಿಗ್ಭ್ರಾಂತರಾಗುವಂತೆ ಮಾಡಿದ್ದಾನೆ.
ಒಂದು ದಿನ ಆತ ತಲೆ ತಿರುಗಿ ಬಿದ್ದ. ಸಂದೀಪ್ ತಂದೆ ಬನ್ವಾರಿ ಆದಿವಾಸಿ ಈತನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರು. ಸಂದೀಪ್ನ್ನು ಪರೀಕ್ಷೆ ಮಾಡಿದ ವೇಳೆ ವೈದ್ಯರೇ ಶಾಕ್ ಆಗಿದ್ದರು.
ಸಂದೀಪ್ನ ಸಕ್ಕರೆ ಅಂಶದ ಪ್ರಮಾಣ 1200 ಎಂಜಿ ತಲುಪಿತ್ತು..! ಕೂಡಲೇ ಸಂದೀಪ್ನನ್ನು ಡಾ. ದೀಪಕ್ ಗೌತಮ್ ಎಂಬವರ ಬಳಿ ಕರೆತಂದ ತಂದೆ ಸಂಪೂರ್ಣ ವಿಚಾರವನ್ನು ಹೇಳಿದ್ರು. ಸಂದೀಪ್ಗೆ ಅತಿಯಾದ ತಲೆನೋವು ಇತ್ತು. ಸಂದೀಪ್ ಉಸಿರಾಡುತ್ತಿದ್ದ. ಆದರೆ ಹೃದಯ ಸೇರಿದಂತೆ ಸಂದೀಪ್ ದೇಹದ ಬಹುತೇಕ ಅಂಗಗಳು ಕೆಲಸ ಮಾಡೋದನ್ನೇ ನಿಲ್ಲಿಸಿದ್ದವು.
ಸಂದೀಪ್ ದೇಹದಲ್ಲಿ ಸಕ್ಕರೆ ಅಂಶ ಬಹುತೇಕ ಏರಿಕೆಯಾಗಿತ್ತು. ಇದನ್ನ ಹೊರತುಪಡಿಸಿ ಸಂದೀಪ್ ತಲೆಯಲ್ಲಿ ಕೀವು ತುಂಬಿಕೊಂಡಿತ್ತು. ಕೂಡಲೇ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಸಂದೀಪ್ ತಲೆಯಿಂದ 720 ಮಿ.ಲೀ ಕೀವನ್ನು ಹೊರತೆಗೆದಿದ್ದಾರೆ.
ತಲೆಯಲ್ಲಿ ಕೀವು ತುಂಬಿದ್ದರಿಂದಲೇ ಸಂದೀಪ್ ಪ್ರಜ್ಞೆ ತಪ್ಪಿ ಬಿದ್ದಿದ್ದ. ಮಾತ್ರವಲ್ಲದೇ ದೃಷ್ಟಿಯನ್ನೂ ಕಳೆದುಕೊಂಡಿದ್ದ. ಈತನ ದೇಹದಲ್ಲಿ ಸಕ್ಕರೆ ಅಂಶವನ್ನು ಹತೋಟಿಗೆ ತರುವ ಸಲುವಾಗಿ ವೈದ್ಯರು ದಿನಕ್ಕೆ 6 ಯುನಿಟ್ ಇನ್ಸುಲಿನ್ ನೀಡುತ್ತಿದ್ದಾರೆ.
ವೈದ್ಯರ ಸಲಹೆಯಂತೆ ಸಂದೀಪ್ ಕಣ್ಣಿಗೆ ಚಿಕಿತ್ಸೆ ಆರಂಭಿಸಲಾಯ್ತು. ಮೊದಲು ಸಂದೀಪ್ ಎಡಗಣ್ಣು ಹಾಗೂ ಐದು ದಿನಗಳ ಬಳಿಕ ಬಲಗಣ್ಣು ತನ್ನ ದೃಷ್ಟಿಯನ್ನು ವಾಪಾಸ್ ಪಡೆದಿದೆ. ಸದ್ಯ ಸಂದೀಪ್ಗೆ ಚಿಕಿತ್ಸೆಯೇನೋ ಮುಂದುವರಿದಿದೆ. ಆತ ಅಪಾಯದಿಂದ ಪಾರಾಗಿದ್ದಾನೆ.